ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಿ

000
Published on

ಚಿಕ್ಕೋಡಿ ಗ್ರಾಮೀಣ: ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಮಂದಿರಳಿಂದ ಧರ್ಮ ಜಾಗೃತಿ ಕಾರ್ಯಗಳಾಗಬೇಕು ಎಂದು ಕಾಡಾಪುರದ ಸಿದ್ಧಾರೂಢ ಮಠದ ನಾಗಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಮರಗುಬಾಯಿ ದೇವಸ್ಥಾನದ ನವೀಕೃತ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಹಿರಿಯರಿಂದ ಗ್ರಾಮೀಣ ಸಂಸ್ಕೃತಿ ಉಳಿದು ಬೆಳೆದಿವೆ. ಅವುಗಳನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಮುಜರಾಯಿ ಸಚಿವೆಯಾಗಿದ್ದಾಗ ಯಕ್ಸಂಬಾ ಮರಗುಬಾಯಿ ಮಂದಿರ ಜೀರ್ಣೋದ್ಧಾರಕ್ಕಾಗಿ ೧೦ ಲಕ್ಷ ರೂ. ಅನುದಾನ ಮಂಜೂರಾಗಿದೆ. ಮಂದಿರ ಕಮಿಟಿ ಅವರು ಹಲವರ ಸಹಕಾರದಿಂದ ಒಳ್ಳೆಯ ರೀತಿಯಲ್ಲಿ ಮಂದಿರ ಸಜ್ಜುಗೊಳಿಸಿದ್ದಾರೆ ಎಂದರು.

ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ, ಯಕ್ಸಂಬಾ ಶಿವಯೋಗಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿದರು.

ಮಂದಿರ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ವಿವಿಧ ವಾಧ್ಯಮೇಳ ಹಾಗೂ ಸುಮಂಗಲೆಯರ ಪೂರ್ಣಕುಂಭ ಮೇಳದೊಂದಿಗೆ ಉತ್ಸವ ಮೂರ್ತಿ ಹಾಗೂ ವಿವಿಧ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಗಣೇಶ ಹುಕ್ಕೇರಿ, ಜ್ಯೋತಿಪ್ರಸಾದ ಜೊಲ್ಲೆ, ನೀಲಾಂಬಿಕಾ ಹುಕ್ಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net