ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿ

3BK2
ಬಸವಕಲ್ಯಾಣದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾದೂ ಕಾರ್ಯಕ್ರಮವನ್ನು ಡಾ.ಮಹೇಶ ಪಾಟೀಲ್ ಉದ್ಘಾಟಿಸಿದರು. ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಬದ್ರಿನಾಥ ಪಾಟೀಲ್, ಶಾಂತಲಿಂಗ ಮಠಪತಿ, ರೇವಣಸಿದ್ದಪ್ಪ ಜಲಾದೆ, ರಮೇಶ ಧಬಾಲೆ, ಸುನೀಲ ಮದಕಟ್ಟಿ ಇದ್ದರು.
Published on

ಬಸವಕಲ್ಯಾಣ: ಸೇಡಂನಲ್ಲಿ ೨೯ರಿಂದ ಫೆ.೬ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವವು ಶಾಲಾ-ಕಾಲೇಜು ಮಕ್ಕಳು ಹಾಗೂ ರೈತರು ಮಹಿಳೆಯರು ಎಲ್ಲರಿಗೂ ಉಪಯೋಗವಾಗುವ ಕಾರ್ಯಕ್ರಮವಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಡಾ.ಮಹೇಶ ಪಾಟೀಲ್ ಹೇಳಿದರು.

ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರ ನಿಮಿತ್ತ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾದೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಂತರ ಮಂಗಳೂರಿನ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ ಅವರಿಂದ ಜಾಗೃತಿ ಜಾದೂ ಕಾರ್ಯಕ್ರಮ ಜರುಗಿತು. ಒಂದು ಗಂಟೆಗೂ ಹೆಚ್ಚು ಕಾಲ ಪ್ರದರ್ಶಸುವ ಜತೆಗೆ ಪರಿಸರ ರಕ್ಷಣೆ, ಸ್ವಚ್ಛತೆ, ಒಣ ಕಸ ಹಾಗೂ ಹಸಿ ಕಸಗಳನ್ನು ಬೇರ್ಪಡಿಸುವುದು, ಪ್ಲಾಸ್ಟಿಕ್ ಮುಕ್ತ ಸಮಾಜ ಮಾಡುವುದು, ಬಳಸಿದ ವಸ್ತುಗಳನ್ನು ರಿಸೈಕ್ಲಿಂಗ್ ಮಾಡಿ ಪುನರ್ ಉಪಯೋಗಿಸುವುದು ಮತ್ತು ದೇಶಭಕ್ತಿ ವಿಷಯಗ ಕುರಿತು ಜಾಗೃತಿ ಮೂಡಿಸಿದರು.

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ನಿರ್ದೇಶಕ ಬದ್ರಿನಾಥ ಪಾಟೀಲ್, ಕಸಾಪ ತಾಲೂಕಾಧ್ಯಕ್ಷ ಶಾಂತಲಿಂಗ ಮಠಪತಿ, ಜಿಲ್ಲಾ ವಿಕಾಸ ಅಕಾಡೆಮಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ ಧಬಾಲೆ, ಸುನೀಲ ಮದಕಟ್ಟಿ, ಶರಣಪ್ಪ ದುರ್ಗೆ, ಡಾ.ರುದ್ರಮಣಿ ಮಠಪತಿ, ಮಲ್ಲಿಕಾರ್ಜುನ ಲಕಶೆಟ್ಟಿ, ಚಿತ್ರಶೇಖರ ಚಿರಳ್ಳಿ, ರುದ್ರೇಶ್ವರ ಗೋರ್ಟ್ ಹಾಗೂ ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು.

ಅಕಾಡೆಮಿ ತಾಲೂಕು ಅಧ್ಯಕ್ಷ ಪ್ರಕಾಶ ಪ್ರಕಾಶ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಮೇಶ ಧಬಾಲೆ ವಂದಿಸಿದರು. ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net