

ಭಾಲ್ಕಿ: ಕಲಬುರಗಿ ಜಿಲ್ಲೆಯಲ್ಲಿ ಐತಿಹಾಸಿಕವಾಗಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಜಿಲ್ಲೆಯ ಜನರು ಕೈಜೋಡಿಸಬೇಕು ಎಂದು ಸೇಡಂ ಕೊತ್ತಲ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಭಾನುವಾರ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, 2025ರ ಜ.29ರಿಂದ É.6ರವರೆಗೆ ಸೇಡಂ-ಕಲಬುರಗಿ ಮಧ್ಯದ 250 ಎಕರೆ ಜಾಗದಲ್ಲಿ 9 ದಿನ ಉತ್ಸವ ಜರುಗಲಿದ್ದು, ಅದ್ದೂರಿಯಾಗಿ ನಡೆಸಲು ಭರದ ಸಿದ್ಧತೆ ನಡೆದಿದೆ ಎಂದರು.
ಉತ್ಸವದಲ್ಲಿ 25-30 ಲP್ಷÀ ಜನ, ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿ, ಕೇಂದ್ರ ಸಚಿವರು, ಮಠಾಧೀಶರು, ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಯುವ ಮುಖಂಡ ಚನ್ನಬಸವಣ್ಣ ಬಳತೆ ಮಾತನಾಡಿ, ಕಲ್ಯಾಣದ ಪ್ರಗತಿಗೆ ಈ ಉತ್ಸವ ಪೂರಕವಾಗಿದೆ ಎಂದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟz್ದÉÃವರು ಸಾನ್ನಿಧ್ಯ ವಹಿಸಿದ್ದರು. ಅP್ಷÀಯ ಮುದ್ದಾ ಮಾತನಾಡಿದರು. ಕಸಾಪ ತಾಲೂಕು ಅಧ್ಯP್ಷÀ ನಾಗಭೂಷಣ ಮಾಮಡಿ, ರೋಟರಿ ಕ್ಲಬ್ ತಾಲೂಕು ಅಧ್ಯP್ಷÀ ಸಂಜೀವಕುಮಾರ ಪಂಡರಗೆರೆ, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಶಿವಲಿಂಗ ಕುಂಬಾರ, ಸೋಮನಾಥ ಮುದ್ದಾ ಇತರರಿದ್ದರು. ಮಲ್ಲಿಕಾರ್ಜುನ ರಾಜೋಳಕರ್ ನಿರೂಪಣೆ ಮಾಡಿದರು. ರೇವಣಸಿದ್ದ ಜಾಡರ್ ವಂದಿಸಿದರು.