

ಶಿರಾ: ಇತ್ತೀಚೆಗೆ ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗೆ ಹೆಚ್ಚಾಗುತ್ತಿದೆ. ದೇವಸ್ಥಾನಗಳು ಮೂಲ ಪರಂಪರೆ, ಧರ್ಮ ಮತ್ತು ಭಾರತೀಯ ಸಂಸತಿಯನ್ನು ಉಳಿಸಬೇಕು. ಧಾರ್ಮಿಕ ಚಟುವಟಿಕೆಗಳೊಂದಿಗೆ ಕಲೆ, ಸಾಮಾಜಿಕ ಸೇವೆ ಹಾಗೂ ಧರ್ಮ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಮೈಸೂರು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ತಿಳಿಸಿದರು. ತಾಲೂಕಿನ ಯಲಿಯೂರು ಗ್ರಾಮದ ತೋಟದ ತಪೋವನದಲ್ಲಿ ಲಕ್ಷಿ$್ಮ ಪ್ರತ್ಯಂಗಿರಾ ದೇವಿ ದೇವಾಲಯ ಚಾರಿಟಬಲ್ ಟ್ರಸ್ಟ್ನಿಂದ ನೂತನವಾಗಿ ನಿರ್ಮಿಸಿರುವ ದೇವಸ್ಥಾನದಲ್ಲಿ ಲಕ್ಷಿ$್ಮ ಪ್ರತ್ಯಂಗಿರಾ ದೇವಿ ಪ್ರತಿಷ್ಠಾಪನೆ, ಶಿಖರ ಕಳಸಾರೋಹಣ, ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಸೇವೆ, ಕಲೆ, ಸಂಸತಿ ಹಾಗೂ ಧರ್ಮ ಸಂರಕ್ಷಣೆಯ ಪರಂಪರೆಯನ್ನು ಮಠಗಳು ಬೆಳೆಸಿಕೊಂಡು ಬರುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಇತ್ತೀಚಿನ ಜೀವನದ ಜಂಜಾಟದ ಬದುಕಿನಲ್ಲಿ ಮನುಷ್ಯನಿಗೆ ನೆಮ್ಮದಿ ಹಾಗೂ ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗುವುದರಲ್ಲಿ ಧಾರ್ಮಿಕ ಕೇಂದ್ರದ ಪಾತ್ರ ಬಹುಮುಖ್ಯವಾಗಿದೆ ಎಂದರು.
ವಿದ್ವಾನ್ ಡಾಕ್ಟರ್ ಗೋಪಾಲಕೃಷ್ಣ ಶರ್ಮ ಗುರೂಜಿ ಮಾತನಾಡಿ, ಹಿರಣ್ಯಾಕ್ಷನನ್ನು ಸಂಹಾರ ಮಾಡುವಾಗ ನರಸಿಂಹ ಸ್ವಾಮಿಯ ಉಗ್ರ ಸ್ವರೂಪವನ್ನು ಶಾಂತ ಮಾಡಲು ಶಿವನು ತನ್ನ ಮೂರನೇ ಕಣ್ಣಿನಿಂದ ಪ್ರತ್ಯಂಗಿರಾ ದೇವಿಯನ್ನು ಸೃಷ್ಟಿ ಮಾಡಿದನು. ಆ ಸಂದರ್ಭದಲ್ಲಿ ಲಕ್ಷಿ$್ಮ ನರಸಿಂಹ ಸ್ವಾಮಿಯ ಬಳಿಯಲ್ಲಿಯೇ ಇದ್ದಿದ್ದರಿಂದ ಶ್ರೀ ಲಕ್ಷಿ$್ಮ ಪ್ರತ್ಯಂಗಿರಾ ದೇವಿಯಾಗಿ ನೆಲೆಸಿದ್ದಾರೆ. ಈ ದೇವಿಯನ್ನು ಆರಾಧನೆ ಮಾಡುವುದರಿಂದ ಯಾವುದೇ ಮಾಟ, ಮಂತ್ರ ತಂತ್ರಗಳು ಮನುಷ್ಯರಿಗೆ ನಾಟುವುದಿಲ್ಲ. ಸಾತ್ವಿಕ ರೂಪದಲ್ಲಿರುವ ದೇವಿಯು ಅನೇಕ ಶುಭ ಕಾರ್ಯಗಳನ್ನು ನಡೆಸಿಕೊಡುತ್ತಾಳೆ ಎಂದು ತಿಳಿಸಿದರು.
ಧರ್ಮದರ್ಶಿ ವೇದಬ್ರಹ್ಮ ಬಸವರಾಜ ಶಾಸ್ತ್ರಿಗಳು ಶಿರಾ ತಾಲೂಕಿನ ಯಲಿಯೂರಿನ ತೋಟದ ತಪೋವನದಲ್ಲಿ ಭವ್ಯವಾಗಿ ನಿರ್ಮಿಸಿರುವ ಈ ದೇವಸ್ಥಾನದಲ್ಲಿ ಲಕ್ಷಿ$್ಮ ಪ್ರತ್ಯಂಗಿರಾ ದೇವಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಈ ಭಾಗದ ಎಲ್ಲರಿಗೂ ದೇವಿಯ ಆರಾಧನೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ನಾದ ಭಾಸ್ಕರ ಶಿವಶಂಕರ ಶಾಸ್ತ್ರಿ ಸಾರಥ್ಯದಲ್ಲಿ ಗಾನಸುದೆ
ತಂಡದವರಿಂದ ಸುಗಮ ಸಂಗೀತ ನೆರವೇರಿತು.
ಮೈಸೂರು ಮಹಾರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹಾಗೂ ಜ್ಯೋತಿಷಿ ಡಾ.ಗೋಪಾಲಕೃಷ್ಣ ಶರ್ಮ ಗುರೂಜಿ ಅವರನ್ನು ವಿವಿಧ ಕಲಾತಂಡಗಳೊಡನೆ ಯಲಿಯೂರಿನ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಪೂರ್ಣ ಕುಂಭ ಸ್ವಾಗತದ ಮೂಲಕ
ನೂತನ ದೇವಸ್ಥಾನಕ್ಕೆ ಕರೆತರಲಾಯಿತು.
ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಯಜ್ಞ ಮಂಟಪದ ಉದ್ಘಾಟನೆಯನ್ನು ಟಿ.ಬಿ.ಜಯಚಂದ್ರ ನೆರವೇರಿಸಿದರು. ತುಮಲ್ ನಿರ್ದೇಶಕ ಎಸ್.ಆರ್.ಗೌಡ, ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಮರಿಯಪ್ಪ, ವೆಂಕಟೇಶ್ ಲಾಡ್,
ಯಲಿಯೂರ್ ಗ್ರಾಪಂ ಅಧ್ಯಕ್ಷೆ ಸುಷ್ಮಾ ಮೋಹನ್ ಕುಮಾರ್, ಉಪಾಧ್ಯಕ್ಷ ರಾಮಚಂದ್ರ, ತಾಲೂಕು ಪಂ ಚಾಯಿತಿ ಮಾಜಿ ಅಧ್ಯಕ್ಷ ಚಂದ್ರಯ್ಯ, ಎಸ್ ಕೆ ಜಿ ರಾಮಚಂದ್ರ ಗುಪ್ತ ಮತ್ತಿತರರು ಇದ್ದರು.