ಭಾರತೀಯ ಯೋಗ ಪರಂಪರೆ ಉಳಿಸಿ

13 gkp 01
ಕೈಕೇರಿ ಭಗವತಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಆಯೋಜಿಸಿದ್ದ ಯೋಗ ಚಾಲೆಂಜಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು.
Published on

ಗೋಣಿಕೊಪ್ಪ: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸೂರ್ಯ ನಮಸ್ಕಾರ ಉತ್ತಮ ಯೋಗ ವಿಧಾನ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಕೈಕೇರಿ ಭಗವತಿ ದೇವಸ್ಥಾನದ ಆವರಣದಲ್ಲಿ ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರ, ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಸೂರ್ಯ ನಮಸ್ಕಾರ ಚಾಲೆಂಜ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗ ಪರಂಪರೆ ಭಾರತದ ಮೂಲದ್ದು ಎಂಬುದೇ ಹೆಮ್ಮೆ. ಇದನ್ನು ಇಂದು ವಿದೇಶಿಗರು ಹೆಚ್ಚಾಗಿ ಪಾಲನೆ ಮಾಡುತ್ತಿದ್ದಾರೆ. ಸೂರ್ಯ ನಮಸ್ಕಾರ ಏಕಾಗ್ರತೆ ಸಾಧಿಸಲು ಉತ್ತಮ ಸಾಧನ ಎಂದರು.
ಉಮಾಮಹೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಡಾ. ಕೆ. ಎನ್. ಚಂದ್ರಶೇಖರ್ ಮಾತನಾಡಿದರು. ಉದ್ಯಮಿ ಜಿ.ಲಕ್ಷ್ಮೀ ರೆಡ್ಡಿ ಮತ್ತು ಸುಭಾಷಿಣಿ ರೆಡ್ದಿ ದಂಪತಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷೆ ಮನ್ನಕಮನೆ ಸೌಮ್ಯಾ ಬಾಲು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ, ಪ್ರಮುಖರಾದ ನರಸಿಂಹ, ಡಾ. ಸುರೇಶ್, ಡಾ. ಸೌಮ್ಯಾ, ಯೋಗ ಶಿಕ್ಷಕರಾದ ಗುರುರಂಗಯ್ಯ ಬಲ್ಲಾಳ್, ಅಮೃತ ರಾಕೇಶ್ ಇದ್ದರು. 100ಕ್ಕೂ ಹೆಚ್ಚು ಯೋಗಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net