ಭಾರತೀಯ ಪರಂಪರೆ ಶ್ರೇಷ್ಠವಾದ್ದು

bkt-25-6
ಬಾಗಲಕೋಟೆ ನಗರದ ವಿಪ್ರ ರಾಯರಮಠದಲ್ಲಿ ವರ್ಧಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಉಡುಪಿ ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಗೌರವಿಸಿದರು.
Published on

ಬಾಗಲಕೋಟೆ: ಭಾರತೀಯ ಪರಂಪರೆಯ ಪುನರುತ್ಥಾನಕ್ಕಾಗಿ ಇಂಗ್ಲಿಷಿನ ವ್ಯಾಮೋಹ ತೊರೆದು ಸಂಸ್ಕೃತ ಭಾಷೆಯ ಅಧ್ಯಯನದ ಕಡೆಗೆ ಒತ್ತು ನೀಡಬೇಕಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.

ಉಡುಪಿ ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ೬೦ನೇ ವರ್ಧಂತಿ ಮಹೋತ್ಸವದ ಪ್ರಯುಕ್ತ ವಿದ್ಯಾಗಿರಿಯ ವಿಪ್ರ ರಾಯರ ಮಠದ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಹಿಂದೂ ಎಂಬ ವ್ಯವಸ್ಥೆಯಿಂದಲೇ ಭಾರತದ ಪರಂಪರೆ ಇಷ್ಟು ಬಲಿಷ್ಠವಾಗಿ ನಿಂತಿದೆ. ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾರಿಡಾರ ನಿರ್ಮಾಣ, ಕಾಶ್ಮೀರವನ್ನು ಭಾರತದ ಜತೆಗೂಡಿಸಲು ವಿಶೇಷ ಸ್ಥಾನಮಾನ ರದ್ದು ಸೇರಿದಂತೆ ಮಹತ್ವದ ನಿರ್ಣಯಗಳು ನಮ್ಮ ಜೀವಿತಾವಽಯಲ್ಲಿ ಆಗಿದೆ. ಹಿಂದೂಗಳಿಗೆ ಅತ್ಯಂತ ಪರ್ವ ಕಾಲ ಇದಾಗಿದೆ ಎಂದರು.

ಚಿನ್ನ, ಬೆಳ್ಳಿಯನ್ನು ತೊಟ್ಟು ಜೀವಿಸುವ ಜಗತ್ತಿನ ಅತ್ಯಂತ ಶ್ರೀಮಂತರು ಯಾರಾದರೂ ಇದ್ದರೆ ಅದು ಹಿಂದೂಗಳು ಮಾತ್ರ. ನಾವೆಂದಿಗೂ ಕೆಬ್ಬಿಣವನ್ನು ಆಭರಣ ಎಂದು ಧರಿಸಿಲ್ಲ. ಭಾರತೀಯ ಪರಂಪರೆ ಶ್ರೇಷ್ಠವಾಗಿದ್ದು, ೧೮ನೇ ಶತಮಾನದಲ್ಲಿ ಜಾತಿ, ಮತ, ಪಂಥಗಳ ಬೇಧವಿರಲಿಲ್ಲ ಎಂಬುದನ್ನು ಗಾಂಽÃಜವರೇ ಹೇಳಿz್ದÁರೆ. ಬ್ರಿಟಿಷರ ಹುನ್ನಾರಕ್ಕೆ ಬಲಿಯಾಗಿ ನಮ್ಮ ಪರಂಪರೆಯ ಬಗ್ಗೆ ನಾವು ಅರಿಯದಂತೆ ಆಗಿದ್ದೇವೆ. ಎಲ್ಲವನ್ನೂ ಇಂಗ್ಲಿಷ್‌ನಲ್ಲಿ ತಿಳಿದುಕೊಳ್ಳುವ ಪ್ರಯತ್ನ ಬಿಟ್ಟು ಸಂಸ್ಕೃತ ಭಾಷೆಯನ್ನು ಕಲಿಯುವುದರ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಅಂಕಗಳಿಸುವುದಕ್ಕಾಗಿ ಸಂಸ್ಕೃತ ಆಯ್ಕೆಯಾಗಬಾರದು. ನಮ್ಮ ಘನಪರಂಪರೆಯನ್ನು ಅರಿಯಲು ಸಂಸ್ಕೃತವನ್ನು ಕಲಿಯಬೇಕು ಎಂದು ತಿಳಿಸಿದರು.

ಜಿ-೭ ರಾಷ್ಟಗಳ ಸಭೆಯಲ್ಲಿ ಪ್ರಧಾನಿ ಮೋದಿ ಅವರು -Á್ರನ್ಸ ಪ್ರಧಾನಿಯೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡದೆ ಹಿಂದಿಯಲ್ಲಿ ಅನುವಾದಕರ ಸಹಾಯದೊಂದಿಗೆ ಮಾತನಾಡಿರುವುದನ್ನು ವಿಪಕ್ಷಗಳು ಅಣುಕಿಸಿವೆ. ಇಂಗ್ಲಿಷ ಬಾರದವರು ಪ್ರಧಾನಿಯಾಗಿz್ದÁರೆ ಎಂದು ಟೀಕಿಸುವುದರ ಹಿಂದೆ ಮೆಕಾಲೆ ಹುಳು ಕಚ್ಚಿದ ಮನಸ್ಥಿತಿ ಕಂಡು ಬರುತ್ತದೆ. ಇಂಗ್ಲಿಷ ಕಲಿಯುವುದಕ್ಕೆ ವಿರೋಧವಿಲ್ಲ. ಆದರೆ ಇಂಗ್ಲಿಷ ಬಾರದಿದ್ದರೆ ಅದನ್ನು ಕೊರತೆ ಎಂದು ಭಾವಿಸುವ ಮನಸ್ಥಿತಿಯಿಂದ ನಾವು ಹೊರಗೆ ಬರಬೇಕಿದೆ ಎಂದು ಹೇಳಿದರು.

ಬೌದ್ಧಧರ್ಮ ಸ್ಥಾಪನೆಯಾದ ಸಂದರ್ಭದಲ್ಲಿ ಪರಂಪರೆಯ ಬಗ್ಗೆ e್ಞÁನವಿಲ್ಲದೇ ವೈದಿಕ ಧರ್ಮದಿಂದ ಅನೇಕರು ಮತಾಂತರಗೊAಡರು. ಮುಂದೆ ಶಂಕರಾಚಾರ್ಯರು ಮರಳಿ ಹಿಂದೂ ಧರ್ಮವನ್ನು ಪುನಸ್ಥಾಪಿಸಿದರು. ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೂಲಕ ಎಲ್ಲರನ್ನೂ ಪ್ರಶ್ನೆ ಮಾಡಿದರು. ಪ್ರಶ್ನೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂದು ಹೇಳಿದ ಏಕಮಾತ್ರ ಧರ್ಮ ನಮ್ಮದು. ಇತರ ಧರ್ಮಗಳಲ್ಲಿ ಪ್ರಶ್ನೆ ಮಾಡುವುದಕ್ಕೆ ಅವಕಾಶವೇ ಇಲ್ಲ. ಪ್ರಶ್ನೆ ಮಾಡುವುದು ಅವರ ಪ್ರಕಾರ ಅಪರಾಧ. ಇಂಥ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಸನಾತನ ಧರ್ಮವನ್ನು ಮುಂದಿನ ಪೀಳಿಗೆಯೂ ಅತ್ಯಂತ ಗರ್ವದಿಂದ ಹೇಳಿಕೊಳ್ಳುವಂತೆ ಮಾಡುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವೇದಿಕೆಯಲ್ಲಿದ್ದರು. ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ. ಭೀಮಸೇನಾಚಾರ್ಯ ಪಾಂಡುರAಗಿ, ಪಂ.ಬಿAದುಮಾಧವಾಚಾರ್ಯ ನಾಗಸಂಪಿಗೆ, ವರ್ಧಂತಿ ಉತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಸೇಡಂಕರ, ಅಧ್ಯಕ್ಷ ರಾಘವೇಂದ್ರ ರಾವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net