

ಚನ್ನಮ್ಮನ ಕಿತ್ತೂರು: ಭಾರತೀಯ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವುದು ಅವಶ್ಯ ಎಂದು ಸ್ಥಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಎಸ್.ಬಿ. ದಳವಾಯಿ ಹೇಳಿದರು.
ಪಟ್ಟಣದ ಸಂಕಲ್ಪ ಸಾಂಸ್ಕತಿಕ ಲಹರಿ ನೃತ್ಯಾಲಯದಲ್ಲಿ ಗಾನಗಾರುಡಿಗ ದಿ. ಬಸಲಿಂಗಯ್ಯ ಹಿರೇಮಠ 65ನೇ ಜನ್ಮದಿನ ನಿಮಿತ್ತ ಗೌರವ ಸಮರ್ಪಣೆ ಹಾಗೂ ಸಂಕಲ್ಪ ಸಾಂಸ್ಕತಿಕ ಲಹರಿ 3ನೇ ವಾರ್ಷಿಕೋತ್ಸವ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಕಲೆ, ಸಾಹಿತ್ಯ, ಸಂಸತಿ ಯುವ ಪೀಳಿಗೆಗೆ ಅರಿಯಬೇಕಿದೆ ಎಂದರು.
ಉಪನ್ಯಾಸಕಿ ಪಾರ್ವತಿ ಲದ್ದಿಮಠ ಮಾತನಾಡಿ, ಸಂಗೀತ, ನೃತ್ಯಕಲೆಗಳು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ದಾರಿದೀಪ ಎಂದರು. ಸಾಧಕ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಸುಪ್ರಿಯಾ ಲಂಗೋಟಿ ಅವರನ್ನು ಸನ್ಮಾನ ಮಾಡಲಾಯಿತು. ಸಾಂಸ್ಕತಿಕ ಕಾರ್ಯಕ್ರಮ ಜರುಗಿತು. ವೀರಯ್ಯ ಲದ್ದಿಮಠ, ನಿರ್ದೇಶಕಿ ಸವಿತಾ ಲದ್ದಿಮಠ, ಸೌಮ್ಯ ರಾವೇಂದ್ರ, ಸಾವಿತ್ರಿ ಗಾರಿಗೆ, ಈಶ್ವರ ಗಡಿಬಿಡಿ, ರವಿಕುಮಾರ ಲದ್ದಿಮಠ, ಹನುಮಂತ ಲಂಗೋಟಿ, ಸಿ.ಸಿ. ಪಾಟೀಲ ಇತರರಿದ್ದರು.