ಭಾರತೀನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ

29-11--krs1
ಕೃಷ್ಣರಾಜಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಂಡವ್ಯ ವಲಯ ಅಂತರ ಕಾಲೇಜು ಪುರುಷರ ಚೆಸ್ ಪಂದಾವಳಿಗಳಿಗೆ ಪ್ರಾಂಶುಪಾಲ ಡಾ.ಚ್.ಎನ್.ಮಂಜುರಾಜು ಚಾಲನೇ ನೀಡಿದರು.
Published on

ಕೆ.ಆರ್.ಸಾಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23ನೇ ಸಾಲಿನ ಮಾಂಡವ್ಯ ವಲಯ ಅಂತರ ಕಾಲೇಜು ಪುರುಷರ ಚೆಸ್ ಪಂದ್ಯಾವಳಿಗೆ ಪ್ರಾಂಶುಪಾಲ ಡಾ.ಎಚ್.ಎನ್.ಮಂಜುರಾಜು ಚಾಲನೆ ನೀಡಿದರು.

ಕ್ರೀಡೆ ಜೀವನದ ಒಂದು ಅಂಗ. ಕ್ರೀಡೆಯಲ್ಲಿ ಮಾತು ನಿಷೇಧ. ಬದಲಾಗಿ ಕೌಶಲ ಮುಖ್ಯ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಿಂದ 5 ಪುರುಷರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಭಾರತೀನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಪ್ರಥಮ), ವಿಜಯ ಪ್ರಥಮ ದರ್ಜೆ ಕಾಲೇಜು (ದ್ವಿತೀಯ), ಹಲಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ತೃತೀಯ) ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಮಂಜುರಾಜು ಬಹುಮಾನ ವಿತರಣೆ ಮಾಡಿದರು.

ಕೆ.ಆರ್.ಸಾಗರ ಪ್ರ.ದ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಉದಯಕುಮಾರ್, ದೈಹಿಕ ನಿರ್ದೇಶಕರಾದ ಭಾಸ್ಕರ್, ಲೊಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net