

ಕೆ.ಎಂ.ದೊಡ್ಡಿ: ಮದ್ದೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಗ್ರ ಪಶಸ್ತಿಗಳಿಸಿದ್ದಾರೆ.
ಕೆ.ಹೊನ್ನಲಗೆರೆ ಆರ್.ಕೆ. ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿ ನವೀನ್ ರಾಜ್ ಉದ್ದ ಜಿಗಿತ ಪ್ರಥಮ, ವೈ.ಎಸ್. ಜೀವನ್ ಗೌಡ 800 ಮೀಟರ್ ಓಟ ಪ್ರಥಮ, ಎಂ.ಎಸ್ ಸಚಿನ್ 3000 ಮೀ ಓಟ ಪ್ರಥಮ, 1500 ಮೀ 100 ಮೀಟರ್ ಓಟ ಮತ್ತು ಹರ್ಡಲ್ಸ್ (ಹೃಷಿಕೇಶ್ ) ತೃತಿಯ ಮತ್ತು ಪ್ರಥಮ ಸ್ಥಾನ, ಶಾಟ್‌ಪುಟ್ ಅರ್ಜುನ್ ತೃತೀಯ ಸ್ಥಾನ ಮತ್ತು ಹ್ಯಾಮರ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.
4್ಡ400 ಮೀ ರಿಲೇ ವಿ. ಮೋಹನ್ ಕುಮಾರ್, ಡಿ.ಎಂ.ಸಂಜು, ಜಿ. ವಿ.ಪವನ, ಕೆ.ಎಸ್.ತರುಣ್ ದ್ವಿತೀಯ ಸ್ಥಾನ, ಸಚಿನ್ ಮತ್ತು ಕುಶಾಲ್ 4್ಡ100 ಮೀ ರಿಲೇ ಪ್ರಥಮ ಸ್ಥಾನ, ಬಾಲಕರ ಗುಂಪು ಸ್ಪರ್ಧೆಗಳಲ್ಲಿ ಥ್ರೋಬಾಲ್, ಖೋ ಖೋ, ಬಾಲ್ ಬ್ಯಾಡ್ಮಿಂಟನ್ , ವಾಲಿಬಾಲ್, ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗ:
ರಂಜು 1500 ಮೀಟರ್ ಓಟ ಮೂರನೇ ಸ್ಥಾನ, ಉದ್ದ ಜಿಗಿತ ಸಾನಿಕಾ ಪ್ರಥಮ, ನಿಮಿಷಾ ದ್ವಿತೀಯ, ತ್ರೀವಿಧ ಜಿಗಿತ ಎಂ.ಕೆ.ಶಿಲ್ಪಾ ಮತ್ತು 100 ಮೀಟರ್ ಓಟ ಬಿ.ಸಾನಿಕಾ ಪ್ರಥಮ, ಶಾಟ್‌ಪುಟ್ ಕೀರ್ತನಾ ಪ್ರಥಮ, 4್ಡ400 ರಿಲೇ ರಂಜು, ನಿತ್ಯಾ, ಕುಶಾಲ, ಶಿಲ್ಪಾ ಪ್ರಥಮ ಸ್ಥಾನ, ಡಿಸ್ಕಸ್ ಎಸೆತ ಕೀರ್ತನಾ ದ್ವಿತೀಯ, ನಿಮಿಷಾ 400 ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, 800 ಮೀಟರ್ ಓಟ ಅನನ್ಯ ದ್ವಿತೀಯ ಸ್ಥಾನ, 4್ಡ400 ಮೀಟರ್ ರಿಲೇಯಲ್ಲಿ ಸಾನಿಅ, ಅನನ್ಯ, ನಿಮಿಷಾ ಪ್ರಥಮ ಸ್ಥಾನ ಸ್ಥಾನಗಳಿಸಿದ್ದಾರೆ.
ಗುಡ್ಡಗಾಡು ಓಟ ಸ್ಪರ್ದೆಯಲ್ಲಿ ಅನನ್ಯ(ಪ್ರಥಮ), ರಂಜು(ದ್ವಿತೀಯ), ಗುಣವತಿ(ತೃತೀಯ), 1500 ಮೀಟರ್ ಓಟ ಮೂರನೇ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಭಾರತೀ ವಿದ್ಯಾ ಸಂಸ್ಥೆಯ ಚೇರ‌್ಮನ್, ವಿಧಾನ ಪರಿಷತ್ ಮಧು ಜಿ.ಮಾದೇಗೌಡ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿಇಒ ಆಶಯ್ ಜಿ. ಮಧು, ಭಾರತಿ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಜವರೇಗೌಡ, ಪ್ರಾಂಶುಪಾಲೆ ಜಿ.ಬಿ.ಪಲ್ಲವಿ, ದೈಹಿಕ ಶಿಕ್ಷಣ ನಿರ್ದೇಶಕಿ, ಎಸ್.ಶೋಭಾ, ಉಪನ್ಯಾಸಕ ಎಂ.ಕೆ.ಸುನೀಲ್‌ಕುಮಾರ್, ಚೇತನ್ ಜುಂಜೀರ್, ಹನುಮಂತೇಗೌಡ, ಎ.ಸಿ.ಮಾನಸಾ, ಡಿ.ಸಿ.ಸುಮಿತ್ರಾ, ರಕ್ಷಿತಾ ಶೆಟ್ಟಿ, ಜಿ.ಬಿ.ನಂದೀಶ್, ಶ್ರೀದತ್ತ, ಬಸವರಾಜು ಅಭಿನಂದಿಸಿದರು.