ಭಾರತದಲ್ಲಿ ಸ್ತ್ರೀಯರಿಗೆ ಅತ್ಯುನ್ನತ ಗೌರವ

8Ckd1
Published on

ಚಿಕ್ಕೋಡಿ: ಮಹಿಳೆಯರಿಗೆ ಸಮಾನ ಹಕ್ಕು, ಸಮಾನ ಅವಕಾಶ ಹಾಗೂ ಒಳ್ಳೆಯ ವಾತಾವರಣ ನಮ್ಮ ದೇಶದಲ್ಲಿ ಮಾತ್ರವಿದೆ ಎಂದು ಬೆಳಗಾವಿ ಎಡಟೆಕ್ ಎಲ್‌ಪಿಪಿ ಸಂಸ್ಥಾಪಕಿ ಚೇತನಾ ಸಾರಂಗ ಹೇಳಿದರು.

ಇಲ್ಲಿನ ಕೆಎಲ್‌ಇ ಇಂಜಿನೀರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರು ಅಸೂಯೆ ಬದಿಗಿಟ್ಟು ಬೇರೆಯವರಲ್ಲಿನ ಒಳ್ಳೆಯ ಗುಣ ಪ್ರಶಂಸಿಸಬೇಕು. ಹೊಟ್ಟೆಕಿಚ್ಚು, ಅಸುರಕ್ಷಿತ ಭಾವ ಬದಿಗಿಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಮಾತನಾಡಿ, ಮಹಿಳೆಯ ತ್ಯಾಗಕ್ಕಾಗಿ ಕುಟುಂಬದಲ್ಲಿ ಅವಳಿಗೆ ಹೆಚ್ಚು ಗೌರವ ನೀಡಲಾಗುತ್ತದೆ. ಯುವತಿಯರು ಜವಾಬ್ದಾರಿ ಅರಿತು ಹೆಜ್ಜೆ ಇಡಬೇಕು ಎಂದರು.

ಸಾಧಕ ವಿದ್ಯಾರ್ಥಿನಿಯರು, ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಸಪ್ನಾ ಖೋತ, ವಿಜಯಲಕ್ಷ್ಮಿತಂಬುರಿ ಅವರನ್ನು ಸತ್ಕರಿಸಲಾಯಿತು. ಮಹಾಲಕ್ಷ್ಮಿಅರಮಣಿ ಮಿಸ್ ಕೆಎಲ್‌ಇ ಸಿಇಟಿ ಪ್ರಶಸ್ತಿ ಪಡೆದುಕೊಂಡರು.

ಅನಿತಾ ಬಿರಾಜ, ಪ್ರತೀಕ್ಷಾ ಪಾಟೀಲ, ಪ್ರಜ್ಞಾ ಖಟಾವಕರ, ಅಂಕೀತಾ ಕಮ್ಮಾರ, ಪ್ರತೀಕ್ಷಾ ಭಾಟಗಿ ಮಹಿಳಾ ಮಾತನಾಡಿದರು.

ಮಹಿಳಾ ಘಟಕದ ಸಂಯೋಜಕಿ ಸುಂದರ ಗೋಟುರೆ ವಾರ್ಷಿಕ ವರದಿ ಓದಿದರು. ಧನಶ್ರೀ ಖೋತ ಸ್ವಾಗತಿಸಿದರು. ತನ್ವಿ ನಿಲಕಂಠನವರ ಮತ್ತು ಕೀರ್ತಿ ಪಾಟೀಲ ನಿರೂಪಿಸಿದರು. ಪೂರ್ಣಿಮಾ ಅವರೊಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net