ಭಾರತದಲ್ಲಿ ಗುರುಪರಂಪರೆಗಿದೆ ವಿಶೇಷ ಮಹತ್ವ

5,KHH-1P
Published on

ಕಾನಹೊಸಹಳ್ಳಿ: ಮಾಜಿ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ತತ್ವಶಾಸ್ತ್ರದ ಮಹಾನ್ ಜ್ಞಾನಿಯಾಗಿ ಭಾರತದ ಸಾಂಸ್ಕೃತಿಕ ಪರಂಪರೆಗೆ ಮೆರುಗು ತಂದ ಮಹಾನ್ ನಾಯಕ ಆಗಿದ್ದಾರೆ ಎಂದು ಕೇಂದ್ರೀಯ ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜರೆ ತಿಳಿಸಿದರು.

ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಭಾರತ ಗುರು ಪರಂಪರೆಗೆ ಕೀರ್ತಿ ತಂದಿರುವ ದೇಶವಾಗಿದೆ. ಈ ನೆಲದ ಗುರು ಪರಂಪರೆಗೆ ಬಹಳ ಮಹತ್ವವಿದೆ. ಇದರಿಂದಾಗಿ ಶಿಕ್ಷಕರನ್ನು ಗೌರವ ಮತ್ತು ಭಕ್ತಿಯಿಂದ ಸ್ಮರಣೆ ಮಾಡುವ ಪರಂಪರೆ ಪ್ರಾಚೀನ ಕಾಲದಲ್ಲೂ ಇತ್ತು. ಈ ಪರಂಪರೆಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗಿದೆ ಎಂದರು.

ಗ್ರಾಮೀಣ ಭಾಗದ ಶಾಲೆಗಳಲ್ಲಿ ದಾಖಲಾತಿ ಇಳಿಮುಖವಾಗಿಲು ಪಾಲಕರು ನೇರ ಕಾರಣವಾಗಿದ್ದಾರೆ. ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸಬೇಕೆಂಬ ಪಾಲಕರ ವ್ಯಾಮೋಹ ಅದಕ್ಕೆ ಕಾರಣ. ತಾಲೂಕಿನಲ್ಲಿ ಯಾವುದೇ ಖನಿಜ ಮತ್ತು ಜಲ ಸಂಪತ್ತು ಇಲ್ಲ. ಆದರೂ, ಶೈಕ್ಷಣಿಕ ಪ್ರಗತಿಯಲ್ಲಿ ಹಿನ್ನಡೆಯಾಗಿಲ್ಲ. ತಾಲೂಕಿನಲ್ಲಿ ಪಂಡಿತ ಪರಂಪರೆಯೊಂದಿಗೆ ಗುರು ಪರಂಪರೆ ನೂರಾರು ವರ್ಷಗಳಿಂದ ಬೆಳೆದು ಬಂದಿದೆ ಎಂದು ಸುದೇಶ್ ಗೋಪಾಲ್ ಮಲಾಜರೆ ತಿಳಿಸಿದರು. ಉಪನ್ಯಾಸಕರಾದ ಕಿರಣ, ವೆಂಕಟೇಶ್, ಗಣೇಶ್, ಮೊನಾಲು ರಾಜ್, ನವೀನ್, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net