ಭಾರತದ ಮಣ್ಣಿನಲ್ಲಿ ಅಡಗಿದೆ ಶಕ್ತಿ

1308 ard 02
Published on

ಔರಾದ್: ವಿಶ್ವದಲ್ಲೇ ಭಾರತ ತನ್ನದೇ ಆದ ಭಾಷೆ, ಸಂಸ್ಕೃತಿ, ಧರ್ಮ, ಜನಾಂಗ, ಪ್ರಕೃತಿಯ ವೈವಿಧ್ಯತೆ ಹೊಂದಿದ್ದರೂ ಏಕತೆ ಕಾಪಾಡಿಕೊಂಡಿದೆ. ಇದು ನಮ್ಮ ದೇಶದ ಮಣ್ಣಿನ ಮಹಿಮೆ ಎಂದು ಜಾನಪದ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ಸಂಜುಕುಮಾರ ಜುಮ್ಮಾ ಹೇಳಿದರು.
ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಜಾನಪದ ಪರಿಷತ್ ಸಹಯೋಗದಡಿ ಸಂತಪುರದ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ನಮ್ಮ ಮಣ್ಣು, ನಮ್ಮ ದೇಶ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮಣ್ಣಿನಲ್ಲಿ ಅದ್ಭುತ ಶಕ್ತಿ ಅಡಗಿದೆ. ಹಲವು ರೋಗಗಳನ್ನು ವಾಸಿ ಮಾಡುವ ಗುಣ ಹೊಂದಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಶಿವಶರಣಪ್ಪ ವಲ್ಲೆಪುರೆ ಮಾತನಾಡಿ, ಅಸಹಾಯಕರಿಗೆ ಸಹಾಯ ಮಾಡುವುದು ನಮ್ಮ ಸಂಸ್ಕೃತಿ. ಇದನ್ನು ಯುವಕರು ಅರಿತುಕೊಳ್ಳುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಲಲಿತಮ್ಮ ಮತ್ತು ಸಂಗಡಿಗರಿಂದ ಗೋಂದಳಿ ಹಾಡಲಾಯಿತು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಉಪನ್ಯಾಸಕ ಕಲ್ಲಪ್ಪ ಬುಟ್ಟೆ, ಈರಮ್ಮ ಕಟಗಿ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಸಿದ್ದಾರೂಢ ಪಂಚಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net