

ಚಿಕ್ಕಮಗಳೂರು: ಭಾರತದ ಬೆಳಕು, ಆಧುನಿಕ ಭಾರತದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳು ದೇಶದ ಅಭಿವೃದ್ಧಿಗೆ ಸಹಕರಿಸುತ್ತದೆ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಜಿಲ್ಲಾಡಳಿತದಿಂದ ನಗರದ ಜಿಪಂ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪ್ರಪಂಚ ಕಂಡ ಅತ್ಯಂತ ಪ್ರಭುದ್ಧ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್. ಸಮಾಜ ಸುಧಾರಕ, ನ್ಯಾಯಶಾಸ್ತçಜ್ಞ, ಅರ್ಥಶಾಸ್ತçಜ್ಞ, ಬಹುಭಾಷಾ ವಾಗ್ಮಿ ಹಾಗೂ ಸಾಮಾಜಿಕ ಚಿಂತಕ ಹೀಗೆ ಬಹು ಪ್ರತಿಭೆಯುಳ್ಳ ಬಾಬಾ ಸಾಹೇಬರು ಸಮಾಜದಲ್ಲಿನ ಅಸ್ಪÊಶ್ಯತೆ, ಜಾತಿವಾದ, ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳ ಕತ್ತಲನ್ನು ಹೋಗಲಾಡಿಸಿ ಸಮಾನತೆ, ಸಹಿಷ್ಣುತೆ, ಸಹೋದರತ್ವ, ಸಾರ್ವಭೌಮತ್ವದ ದೀಪ ಹಚ್ಚಿ ಭಾರತದ ಸಂವಿಧಾನ ರಚಿಸಿ ದೇಶದ ಬೆಳಕಾಗಿ ನಿಂತವರು. ಅವರ ವಿಚಾರ ದಾರೆಗಳು ಸದಾ ಜೀವಂತವಾದುದು ಎಂದರು.
ಸಮಾಜದ ಶೋಷಿತ ವರ್ಗದವರ ಧ್ವನಿಯಾಗಿ ಅವರ ಬದುಕನ್ನು ಸುಧಾರಿಸಲು ಮತ್ತು ಸಮಾನತೆ, ಸ್ವಾತಂತ್ರö್ಯದಿAದ ಜೀವಿಸುವ ಹಕ್ಕನ್ನು ನೀಡಲು ಹಲವಾರು ಹೋರಾಟಗಳನ್ನು ಮಾಡಿ ನೊಂದ ಜೀವಗಳ ಪರ ನಿಂತ ಅವರು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವುದರೊಂದಿಗೆ ಲಿಂಗ ತಾರತಮ್ಯವನ್ನು ಹೋಗಲಾಡಿಸಿದರು. ಬಡತನದಲ್ಲಿದ್ದರು ಶಿಕ್ಷಣದ ಮೂಲಕ ಪ್ರಪಂಚದ ಹಲವಾರು ಸಂವಿಧಾನಗಳನ್ನು ಓದಿ ಭಾರತದ ಸಂವಿಧಾನ ಶಿಲ್ಪಿಯಾದರು. ಭಾರತದಲ್ಲಿ ಪೂರ್ವಗ್ರಹ ಮತ್ತು ಜಾತಿ ತಾರತಮ್ಯವನ್ನು ಎದುರಿಸಿ ಸಾಮಾಜಿಕ ನ್ಯಾಯ ಹಾಗೂ ರಾಷ್ಟಿçÃಯ ಪುನರುಜ್ಜೀವನದ ಹರಿಕಾರರಾದರು. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾದುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಾರತದ ಸುಭದ್ರತೆಯನ್ನು ಕಾಪಾಡಲು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿದವರು ಅಂಬೇಡ್ಕರ್, ತಮ್ಮ ತತ್ವಗಳು, ಚಿಂತನೆಗಳ ಮೂಲಕ ಭಾರತದ ಜ್ಯೋತಿಯಾಗಿ ಸದಾ ಅಭಿವೃದ್ಧಿ ಕಾರ್ಯಗಳಿಗೆ ಬೆಳಕಾಗಿದ್ದಾರೆ. ಅಂಬೇಡ್ಕರ್ ಅವರ ಬೌದ್ಧಿಕ ಸಾಮರ್ಥ್ಯ ಅಸಾಧಾರಣವಾದುದು. ದೀನ ದಲಿತರ ರಾಜಕೀಯ ಹಕ್ಕುಗಳು ಮತ್ತು ಸಾಮಾಜಿಕ ಸ್ವಾತಂತ್ರö್ಯಕ್ಕಾಗಿ ದಣಿವಿನ ಅರಿವಿಲ್ಲದೆ ಶ್ರಮಿಸಿದರು. ಅವರ ಜೀವನ ಮತ್ತು ಸಾಧನೆಗಳು, ತತ್ವ ಸಿದ್ಧಾಂತಗಳಿಗೆ ವಿಶ್ವವೇ ಮೆಚ್ಚಿ ತಲೆಬಾಗುತ್ತದೆ. ಪ್ರಬುದ್ಧ ಅರ್ಥಶಾಸ್ತçಜ್ಞ ಮತ್ತು ಸಂಸ್ಥೆ ನಿರ್ಮಾಪಕರಾದ ಡಾ. ಬಿ.ಆರ್ ಅಂಬೇಡ್ಕರ್ ಅನೇಕ ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅರ್ಥಶಾಸ್ತçದ ಕುರಿತಾದ ಅವರ ಗ್ರಂಥಗಳು ಭಾರತವು ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವಗುರುವಾಗಲು ಸಹಕಾರಿಯಾಗಿದೆ. ಸರ್ಕಾರವು ಅವರ ಬದುಕಿನ ಸಾಧನೆಗಳನ್ನು ಸ್ಮಾರಕಗಳು, ಗ್ರಂಥಾಲಯಗಳನ್ನು ನಿರ್ಮಿಸುವ ಮೂಲಕ ಯುವ ಜನರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಪ್ರಪಂಚದಾದ್ಯAತ ಲಕ್ಷಾಂತರ ಭಾರತೀಯರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ರಚಿಸಿಕೊಟ್ಟ ಸಂವಿಧಾನವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಂಡು ತಮ್ಮ ಹಕ್ಕಗಳನ್ನು ಧೈರ್ಯದಿಂದ ಪಡೆದುಕೊಳ್ಳುವುದರ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು. ಅವರ ಜೀವನ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಎಚ್.ಎಸ್. ಕೀರ್ತನಾ, ಎಸ್‌ಪಿ ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮAತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮತ್ತಿತರರಿದ್ದರು.