ಭಾರತದ ಪರಮ ವೈಭಕ್ಕೆ ಕೈಜೋಡಿಸಿ

0604Klb12
Published on

ಕಲಬುರಗಿ: ದೇಶದ ಎಲ್ಲ ಜಾತಿ, ಮತ, ಪಂಗಡಗಳವರನ್ನು ಒಳಗೊಂಡು ದೀನ ದಲಿತರ, ವಂಚಿತರ, ಬುಡಕಟ್ಟು ಜನರ, ಶೋಷಿತ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ, ತಾಯಿ ಭಾರತಾಂಬೆಯನ್ನು ಪರಮವೈಭವಕ್ಕೆ ಕೊಂಡ್ಯೊಯ್ಯುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಬಿಜೆಪಿ ವಿಭಾಗಿಯ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ೪೪ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತಾಯಿ ಭಾರತಾಂಬೆಯ ರಕ್ಷಣೆ ಹಿಂದು ಸಂಸ್ಕೃತಿಯ ಸಂರಕ್ಷಣೆಯ ತಳಹದಿಯಲ್ಲಿ ಹುಟ್ಟಿಕೊಂಡ ಪP್ಷÀದಲ್ಲಿ ಅಟಲï ಬಿಹಾರಿ ವಾಜಪೇಯಿ ಅವರು ಬಿಜೆಪಿಯ ಪ್ರಥಮ ಪ್ರಧಾನಿಯಾಗಿ ವಿಶ್ವವೇ ಗುರುತಿಸುವ ಸಾಧನೆ ಮಾಡಿದರು. ಪ್ರಸ್ತುತ ನರೇಂದ್ರ ಮೋದಿ ಅವರು ವಿಶ್ವ ಮೆಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಬಿಜೆಪಿ ಮಂತ್ರವಾಗಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ೪೦೦ರ ಗಡಿ ದಾಟಿ ವಿಜಯ ಸಾಧಿಸಲು ಕಾರ್ಯಕರ್ತರ ಅಹರ್ನಿಶಿ ದುಡಿಮೆ ಬಲ ದೊರೆಯಬೇಕು. ಬೃಹತ್ ಪಕ್ಷದ ಕಾರ್ಯಕರ್ತ ಎನ್ನುವುದು ಹೆಮ್ಮೆಯ ವಿಷಯ. ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬಾಗಿದ್ದಾರೆ. ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಪ್ರಮುಖರಾದ ಶೋಭಾ ಬಾಣಿ, ಅಶೋಕ ಬಗಲಿ, ಸಿದ್ದಾಜಿ ಪಾಟೀಲ್, ಗಿರಿರಾಜ ಯಳಮೇಲಿ, ಮಹಾದೇವ ಬೆಳಮಗಿ, ಭಾಗೀರಥಿ ಗುನ್ನಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net