ಭಾರತದ ಅಭಿವೃದ್ಧಿ ಮೋದಿಯಿಂದಲೇ ಸಾಧ್ಯ

JDS
Published on

ಚಿತ್ರದುರ್ಗ: ವಿಶ್ವವೇ ಭಾರತದತ್ತ ತಿರುಗಿ ನೋಡುವಂತ ಅಭಿವೃದ್ಧಿ ಕಾರ್ಯ ಮುಂದುವರೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ 10 ವರ್ಷ ಉತ್ತಮ ಆಡಳಿತ ನೀಡುವ ಮೂಲಕ ಎಲ್ಲ ವರ್ಗದ ಜನರಿಗೆ ಉಪಯುಕ್ತ ಯೋಜನೆ ಜಾರಿಗೊಳಿಸಿ ಹಿತ ಕಾಪಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾದರೆ, ಆರ್ಥಿಕ ಪ್ರಗತಿಯೊಂದಿಗೆ ದೇಶ ವಿಶ್ವ ಗುರುವಾಗುವ ವಿಶ್ವಾಸ ಅಸಂಖ್ಯಾತ ಭಾರತೀಯರಲ್ಲಿ ಇದೆ ಎಂದರು.

ದೇಶ ಮತ್ತು ರಾಜ್ಯಕ್ಕೆ ಬಿಜೆಪಿ-ಜೆಡಿಎಸ್ ನಾಯಕರು ನೀಡಿದ ಕೊಡುಗೆ ಪ್ರತಿ ಮನೆಗೂ ತಿಳಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತದಾರರಿಗೆ ಸುಳ್ಳನ್ನು ಹೇಳಿ, ಸತ್ಯ ಮರೆ ಮಾಚುತ್ತಿದೆ. ಇದನ್ನು ಕೊನೆಗಾಣಿಸಬೇಕಿದೆ. ಚಿತ್ರದುರ್ಗ ಪ್ರವಾಸೋದ್ಯಮದಿಂದ ವಂಚಿತವಾಗಿದ್ದು, ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರ ನೀಡುವ ವಿಶ್ವಾಸವಿದೆ ಎಂದರು.

ಪದಾಧಿಕಾರಿಗಳಾದ ತಿಮ್ಮಣ್ಣ, ಗುರುಸಿದ್ದಪ್ಪ, ಗೋಪಾಲಸ್ವಾಮಿ ನಾಯಕ, ಪ್ರತಾಪ್ ಜೋಗಿ, ಮಠದಹಟ್ಟಿ ವೀರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net