ಭಾರತ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ

IMG_20231209_124321 copy
Published on


ಯಾದಗಿರಿ: ಈ ಭೂಮಿಗೆ ಸೂರ್ಯನ ಬೆಳಕು ಎಷ್ಟು ಮುಖ್ಯವೋ ಅಷ್ಟೇ ದೇಶಕ್ಕೆ ಅಂಬೇಡ್ಕರ್ ಅವರು ಮುಖ್ಯ. ಅವರು ಈ ದೇಶವನ್ನು ನಿತ್ಯ ಬೆಳಗುವ ಸೂರ್ಯನಿದ್ದಂತೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಪೀಠದ ಡಾ.ಭಾನುಪ್ರಕಾಶ ಸ್ವಾಮೀಜಿ ಹೇಳಿದರು.

ಶಹಾಪುರ ದಗ್ರಾಮಾಂತರ ಬಸ್ನಿಲ್ದಾಣ ಆವರಣದ ಉದ್ಯಾನವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮೂತರ್ಿ ಸ್ಥಾಪಿಸಲು ಒತ್ತಾಯಿಸಿ ಆರು ದಿನಗಳಿಂದ ನಿರಂತರ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ, ಡಾ.ಅಂಬೇಡ್ಕರ್ ಪ್ರಸಿದ್ಧ ರಾಜಕೀಯ ನಾಯಕ, ತತ್ವಜ್ಞಾನಿ, ಬರಹಗಾರ. ಸಾಮಾಜಿಕ ಅಸಮಾನತೆ ನಿಮರ್ೂಲನೆ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸುಧಾರಕ ಎಂದು ಗುಣಗಾಣ ಮಾಡಿದರು.

ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ದೇಶಕ್ಕೆ ಸಂವಿಧಾನ ರಚಿಸಿ ಅಂಬೇಡ್ಕರ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರ ಮೂತರ್ಿ ಕೂಡಿಸುವುದೇ ಒಂದು ಹೆಮ್ಮೆಯ ವಿಷಯ. ಆದರೆ ಅದಕ್ಕೂ ನಾವುಗಳು ಹೋರಾಟ ನಡೆಸಬೇಕಾಗಿರುವ ದುಸ್ಥಿತಿ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net