ಭಾರತ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ: ಯಲಬುರ್ಗಾ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಅಭಿಮತ

26112022 yelburga samvidhana day
Published on

ಯಲಬುರ್ಗಾ: ಇಡೀ ವಿಶ್ವಕ್ಕೆ ಡಾ.ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ಮಾದರಿಯಾಗಿದೆ ಎಂದು ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.

ಸಂವಿಧಾನ ದಿನದ ಪ್ರಯುಕ್ತ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಛಲವಾದಿ ಮಹಾಸಭಾ ಶನಿವಾರ ಹಮ್ಮಿಕೊಂಡಿದ್ದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಭಾರತದ ಪ್ರಜೆಗಳು ತಮ್ಮ ಹಕ್ಕು ಪಡೆದು ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಾಧ್ಯವಾಗಿದೆ. ಎಲ್ಲರೂ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಯಬೇಕು. ಶಿಕ್ಷಣದಿಂದ ಮಾತ್ರ ಜಗತ್ತನ್ನು ಸುಧಾರಿಸಬಹುದು ಎನ್ನುವುದಕ್ಕೆ ಅಂಬೇಡ್ಕರ್ ಸಾಕ್ಷಿಯಾಗಿದ್ದಾರೆ ಎಂದರು.

ಪ್ರಮುಖರಾದ ಸುರೇಶಗೌಡ ಶಿವನಗೌಡ್ರ, ಶಿವನಗೌಡ ದಾನರಡ್ಡಿ, ರಸೂಲ್‌ಸಾಬ್ ದಮ್ಮೂರು ಮಾತನಾಡಿದರು. ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಅಂದಪ್ಪ ಹಾಲಕೇರಿ, ಪ್ರಮುಖರಾದ ಶಿವಾನಂದ ಬಣಕಾರ, ಶಂಕರ ಜಕ್ಕಲಿ, ಸಿದ್ದಪ್ಪ ಕಟ್ಟಿಮನಿ, ಬಿ.ಶಿವಾನಂದ, ಗದ್ದೆಪ್ಪ ಕುಡಗುಂಟಿ, ರಾಮಪ್ಪ ಕಟ್ಟಿಮನಿ, ರವಿ ಗುರಡ್ಡಿ, ಕಳಕೇಶ ಸೂಡಿ, ಮೌನೇಶ ಬಣಕಾರ, ಮಹಾಂತೇಶ ಛಲವಾದಿ, ಸುರೇಶ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net