ಉಭಯ ದೇಶಗಳ ವಿಚಾರದಲ್ಲಿ ಅಮೆರಿಕಾ ಶಹಬ್ಬಾಸ್‌ಗಿರಿ ತೆಗೆದುಕೊಳ್ಳುವಂತಹದ್ದು ಏನಿತ್ತು, ಇದು ಪ್ರತಿಷ್ಠೆಯ ಪ್ರಶ್ನೆ, ಅಳಿವು-ಉಳಿವಿನ ಪ್ರಶ್ನೆ. ನಮ್ಮ ದೇಶಕ್ಕೆ ಆಗಿರಬಹುದು, ಪಾಕಿಸ್ತಾನಕ್ಕೆ ಆಗಿರಬಹುದು, ಅಮೆರಿಕಾ ಮಧ್ಯಸ್ಥಿಕೆ ವಹಿಸಿ ಅವರಿಗೆ ಹೆಸರು ಕೊಡುವ ಅಗತ್ಯವಿರಲಿಲ್ಲ.ಯುದ್ಧದಲ್ಲಿ ಎಷ್ಟೋ ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅವರು ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಅಂತಹದ್ದರಲ್ಲಿ ಇವರು ಏಕಾಏಕಿ ಯುದ್ಧವನ್ನು ನಿಲ್ಲಿಸಿ ಅಮೆರಿಕಾದವರ ಹೆಸರು ತೆಗೆದುಕೊಳ್ಳುವುದು ಅನವಶ್ಯಕ. ಅವರು ಹೆಸರು ತೆಗೆದುಕೊಳ್ಳಬಾರದು. ಪವರ್ ಶೇರಿಂಗ್ ವಿಚಾರ, ಅದರ ಬಗ್ಗೆ ರಾಷ್ಟ್ರೀಯ, ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಎಂದ ಅವರು, ನಮ್ಮ ಹೈಕಮಾಂಡ್ ಇದೆ, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದೆಂದು ನಮಗೆ ಹೈಕಮಾಂಡ್ ಕಟ್ಟಪ್ಪಣೆ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.