

ಹುಬ್ಬಳ್ಳಿ:ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ 2ನೇ ಚತುರ್ದಿನ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ನ್ಯೂಜಿಲೆಂಡ್ ಎ ತಂಡ ಪ್ರಥಮ ಇನ್ನಿಂಗ್ಸ್ನಲ್ಲಿ 2 ವಿಕೆಟ್ಗೆ 39 ರನ್ ಗಳಿಸಿದ್ದಾಗ ಆಟಕ್ಕೆ ಮಳೆ ಅಡ್ಡಿಪಡಿಸಿತು. ಬಳಿಕ ಉಭಯ ತಂಡಗಳ ನಾಯಕರು ಡ್ರಾ ಗೆ ಒಪ್ಪಿಗೆ ಸೂಚಿಸಿದರು.
ಭಾರತ ಎ ತಂಡ ಪ್ರಥಮ ಇನ್ನಿಂಗ್ಸ್ ಅನ್ನು 6 ವಿಕೆಟ್ 229 ರನ್ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು. ಶನಿವಾರ ಸಂಜೆ ಹಾಗೂ ರಾತ್ರಿ ಸುರಿದ ಮಳೆಯಿಂದ ಪಂದ್ಯದ 4ನೇ ದಿನದ ಆಟ ತಡವಾಗಿ ಆರಂಭಗೊಂಡಿತ್ತು. ಮಳೆಯಿಂದ ಈ ಪಂದ್ಯದ ಮೊದಲ ಹಾಗೂ ಮೂರನೇ ದಿನ ಒಂದೂ ಎಸೆತ ಕಾಣದೇ ಸಂಪೂರ್ಣವಾಗಿ ರದ್ದಾಗಿತ್ತು. 2ನೇ ದಿನ 66 ಓವರ್ಗಳಷ್ಟು ಹಾಗೂ 4ನೇ ದಿನ 12.3 ಓವರ್ಗಳಷ್ಟು ಆಟ ನಡೆದಿದೆ.
ಉಭಯ ತಂಡಗಳ ನಡುವೆ ಬೆಂಗಳೂರಿನಲ್ಲಿ ನಡೆದ ಮೊದಲ ಚತುರ್ದಿನ ಟೆಸ್ಟ್ ಡ್ರಾ ಗೊಂಡಿತ್ತು. ಸರಣಿಯ 3ನೇ ಚತುರ್ದಿನ ಟೆಸ್ಟ್ ಪಂದ್ಯ ಸೆ. 15ರಿಂದ ಬೆಂಗಳೂರಿನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ ಎ 229ಕ್ಕೆ 6
ನ್ಯೂಜಿಲೆಂಡ್ ಎ- 12.3 ಓವರ್ಗಳಲ್ಲಿ 2 ವಿಕೆಟ್ಗೆ 39ರನ್ (ಜೋ ಕಾರ್ಟರ್ 17, ರಚಿನ ರವೀಂದ್ರ 14ಎ, ಶಾರ್ದೂಲ್ ಠಾಕೂರ 19ಕ್ಕೆ 1, ಮುಕೇಶ ಕುಮಾರ 2ಕ್ಕೆ 1)