ಭಾರತ ಅಧ್ಯಾತ್ಮದ ತವರೂರು

23kudachi1
Published on

ಕುಡಚಿ: ದೇಶ ಅಧ್ಯಾತ್ಮದ ತವರೂರವಾಗಿದ್ದು, ಶಿವರಾತ್ರಿ ಆಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶಿವನನ್ನು ಭಕ್ತಿಯಿಂದ ಆರಾಧಿಸಿ ಕೃಪೆಗೆ ಪಾತ್ರರಾಗಬೇಕೆಂದು ಹಂಚಿನಾಳದ ಭಕ್ತಿ ಯೋಗ ಆಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭವನದಲ್ಲಿ ಮಹಾ

ಶಿವರಾತ್ರಿಯ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶಿವನ ಡಂಗೂರ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದರು.

ಜಮಖಂಡಿ ಸೇವಾ ಕೇಂದ್ರ ಸಂಚಾಲಕ ರಾಜಯೋಗಿನಿ ಮೀರಾ ಅಕ್ಕ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಮಿತ ಘಾಟಗೆ ಉದ್ಘಾಟಿಸಿದರು.

ಕುಡಚಿ ಸೇವಾ ಕೇಂದ್ರ ರಾಜಯೋಗಿನಿ ವಿದ್ಯಾ ಅಕ್ಕ, ಶಶಿಕಲಾ ಅಕ್ಕ, ಜ್ಯೋತಿ ಅಕ್ಕ, ರತ್ನಂಜಯ ಕದ್ದು, ಶಿವರಾಜ ಬುಸುಗುಂಡೆ,

ಜೈಕುಮಾರ ಸನದಿ, ಶಿವಪ್ಪ ಗಸ್ತಿ, ಮೋಹನ ಲೋಹರ, ದತ್ತಾ ಸಣ್ಣಕ್ಕಿ, ಸಚಿನ ಮನಗುತ್ತಿ, ಭರತೇಶ ಪಾಟೀಲ, ಶ್ರೀಶೈಲ ದರೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net