

ಸಿದ್ದಾಪುರ: ತಾಲೂಕಿನ ಭಾನ್ಕುಳಿಮಠದ ಗೋಸ್ವರ್ಗಕ್ಕೆ ರಾಮಚಂದ್ರಾಪುರ ಮಠದ ಮಾತೃತ್ವಂ ಸಂಘಟನೆಯವರು ಗೋವಿಗಾಗಿ ಮೇವು ಕಾರ್ಯಕ್ರಮದಡಿಯಲ್ಲಿ 40,500 ಕೆ.ಜಿ.ಯಷ್ಟು ಪಶು ಆಹಾರ (ಹಿಂಡಿ)ವನ್ನು ಗೋಸ್ವರ್ಗದ ಸಂಯೋಜಕ ಮಧು ಜಿ.ಕೆ. ಅವರ ಸಮ್ಮುಖದಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮಾಸದ ಮಾತೆ ಮಂಗಲಾ ಅನಂತ ಬೈಂದೂರು ಹಾಗೂ ಅನಂತ ಬೈಂದೂರು ದಂಪತಿ ಮತ್ತು ಭೋವಿ ಸಮಾಜದವರು ಗೋ ಪೂಜೆ ಹಾಗೂ ಸಪ್ತಸನ್ನಿಧಿಯ ಪೂಜೆ ನೆರವೇರಿಸಿದರು.
ಮಾತೃತ್ವಂನ ಸಾಗರ ಪ್ರಾಂತ ಅಧ್ಯಕ್ಷೆ ವೀಣಾ ಭಟ್ಟ, ಗೃಹಲಕ್ಷ್ಮೀ ಕಲ್ಪನಾ ಸತೀಶ, ಪ್ರಾಂತ ಕೋಶಾಧ್ಯಕ್ಷೆ ರುಕ್ಮಾವತಿ ಆರ್. ಚಂದ್ರ, ಸಾಗರ ನಗರ ಅಧ್ಯಕ್ಷೆ ಶಾಂತಾ ಭಾಸ್ಕರ, ಸಿದ್ದಾಪುರ ನಗರ ಅಧ್ಯಕ್ಷೆ ರಾಧಿಕಾ ಭಟ್ಟ, ಕಾರ್ಯದರ್ಶಿ ಚಂದ್ರಮತಿ ಆರ್. ಹೆಗಡೆ, ಸಮಿತಿಯ ಮಾಸದ ಮಾತೆಯರು, ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾತೆಯರಿಂದ ಕನಕಧಾರಾ ಸ್ತೋತ್ರ ಪಠಣ ಹಾಗೂ ರಾಮಜಪ ನಡೆಯಿತು. ಅರ್ಚಕ ಗಜಾನನ ಶಾಸ್ತ್ರಿ ಗೋಪೂಜೆ ನೆರವೇರಿಸಿದರು. ವೀಣಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.