ಭಾನುವಾರ ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮ

vijayavani logo
Award ceremony, official ceremony tomorrow
Published on

ವಿಜಯಪುರ : ಡಾ. ಸಿ.ಆರ್​. ಬಿದರಿ ಸ್ಮರಣಾರ್ಥ ಕ್ಯಾನ್ಸರ್​ ಕುರಿತು ಮುಂದುವರಿದ ವೈದ್ಯಕಿಯ ಶಿಣ ಕುರಿತು ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮ ಫೆ. 2 ರಂದು ನಗರದಲ್ಲಿ ನಡೆಯಲಿದೆ.

ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವೈದ್ಯಕಿಯ ಶಾಸ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅಂದು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ. ಬೆಳಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಿಕಂದರಾಬಾದಿನ ರೆನೊವಾ ಸೌಮ್ಯ ಕಾಂಪ್ರಿಹೆನ್ಸಿವ್​ ಕ್ಯಾನ್ಸರ್​ ಸೆಂಟರ್​ನ ಮೆಡಿಕಲ್​ ಆಂಕಾಲಜಿ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಪಿ.ಎಸ್​. ದತ್ತಾತ್ರೇಯ ಆಗಮಿಸುವರು.

ಡೀಮ್ಡ್​ ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕುಲಪತಿ ಡಾ. ಆರ್​.ಎಸ್​. ಮುಧೋಳ, ರಿಜಿಸ್ಟ್ರಾರ್​ ಡಾ. ಆರ್​.ವಿ. ಕುಲಕರ್ಣಿ, ವೈದ್ಯಕಿಯ ಶಾಸ ವಿಭಾಗದ ಪ್ರೊ. ಆರ್​.ಸಿ. ಬಿದರಿ, ಆಶಾ ಎಂ. ಪಾಟೀಲ ಉಪಸ್ಥಿತರಿರುವರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಮುಂಬೈ ಮತ್ತು ಹೈದರಾಬಾದ್​ ಸೇರಿ ರಾಜ್ಯದ ವಿವಿಧ ಭಾಗಗಳಿಂದ 400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಬಿಎಲ್​ಡಿಇ ಆಸ್ಪತ್ರೆ ವೈದ್ಯಕಿಯ ಶಾಸ ವಿಭಾಗದ ಮುಖ್ಯಸ್ಥ ಡಾ. ಸಂಜೀವ ಬೆಂಟೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net