ಭಾನುವಾರ ಬಿಜಿವಿಎಸ್ 9ನೇ ಸಮ್ಮೇಳನ: ಗೌರವಾಧ್ಯಕ್ಷೆ ಡಾ.ಎ. ಸಾವಿತ್ರಿ ಮಾಹಿತಿ

AHMADH HGRE- press meet (7)
Published on

ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧಿ ಭವನದಲ್ಲಿ ಫೆಬ್ರವರಿ 23ರ ಭಾನುವಾರ ವಿಜ್ಞಾನ ಕಾರ್ಯಕರ್ತರ ವಿಜಿವಿಎಸ್ 9ನೇ ಸಮ್ಮೇಳನ ನಡೆಯಲಿದೆ ಎಂದು ಬಿಜಿವಿಎಸ್ ಗೌರವಾಧ್ಯಕ್ಷೆ ಡಾ. ಎ. ಸಾವಿತ್ರಿ ತಿಳಿಸಿದರು.

ಹಾಸನ ಜಿಲ್ಲಾ ಬಿಜಿವಿಎಸ್‌ನ 9ನೇ ಜಿಲ್ಲಾ ಸಮ್ಮೇಳನ ನಡೆಯಲಿದ್ದು ಇದರ ಅಂಗವಾಗಿ ಜಿಲ್ಲೆಯ ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್ ಅವರು ಬರೆದ ‘ಹವಾಮಾನ ಬದಲಾವಣೆ ಬೇಕೆ ಈ ದಿನಗಳು’ ಪುಸ್ತಕ ಬಿಡುಗಡೆ ಹಾಗೂ ಹವಾಮಾನ ವಿಪ್ಲವ ಭೂ ಜೀವಿಗಳ ಮೇಲೆ ತಂದಿರುವ ಕಂಟಕದದ ಕುರಿತು ವಿಚಾರ ಸಂಕಿರಣ ಕೂಡ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯದರ್ಶಿ ಅಹಮದ್ ಹಗರೆ ಮಾತನಾಡಿ, ವಿಜ್ಞಾನ ಬರಹಗಾರ ಹಾಗೂ ತುಮಕೂರಿನ ಸಪ್ತಗಿರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ನಿರಂಜನಾರಾಧ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಎ.ಸಾವಿತ್ರಿ ಹವಾಮಾನ ಬದಲಾವಣೆ- ಬೇಕೆ ಈ ದಿನಗಳು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಿಜ್ಞಾನ ಬರಹಗಾರ ಹಾಗೂ ‘ಟೀಚರ್’ ವಿಜ್ಞಾನ ಮಾಸ ಪತ್ರಿಕೆಯ ಸಂಪಾದಕ ಉದಯ್ ಗಾಂಪ್ಟರ್ ಹವಾಮಾನ ವಿಪ್ಲವದ ಕುರಿತು ವಿಚಾರ ಮಂಡಿಸಲಿದ್ದಾರೆ. ಆಲೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರೋಹಿತ್ ಅಗಸರಹಳ್ಳಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ.

ಖ್ಯ ಅತಿಥಿಗಳಾಗಿ ಕವಯತ್ರಿ ರೂಪಾ ಹಾಸನ, ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಟೈಮ್ಸ್ ಗಂಗಾಧರ್, ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ಟಿ.ಎ. ಪ್ರಶಾಂತ ಬಾಬು ಹಾಗೂ ಹಾಸನ ಜಿಲ್ಲಾ ಬಿಜಿವಿಎಸ್ ಉಸ್ತುವಾರಿ ಎಸ್.ವಜ್ರಮುನಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ. ಗುರುರಾಜು, ಜಿಲ್ಲಾ ಉಪಾಧ್ಯಕ್ಷೆ ಮಮತಾ ಶಿವು, ತಾಲೂಕಿನ ಅಧ್ಯಕ್ಷ ಎಚ್.ಜಿ. ಮಂಜುನಾಥ್, ಸಹ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net