ಭಾನುವಾರ ಕೊಪ್ಪದಲ್ಲಿ ಪ್ರತಿಭಟನೆ

SRINGERI
ಶೃಂಗೇರಿಯಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಷಡ್ಯಂತ್ರದ ವಿರುದ್ಧ ಪ್ರತಿಭಟನಾ ಸಭೆಯ ಪೂರ್ವಭಾವಿ ಸಭೆಯಲ್ಲಿ ಸಂಚಾಲಕ ರಾಮಕೃಷ್ಣರಾವ್ ಮಾತನಾಡಿದರು. ಕೆ.ಎಂ.ಶ್ರೀನಿವಾಸ್, ವೇಣುಗೋಪಾಲ್, ಶೃಂಗೇರಿ ಶಿವಣ್ಣ ಇತರರಿದ್ದರು.
Published on

ಶೃಂಗೇರಿ: ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದ್ದು, ಇದರಲ್ಲಿ ಸರ್ಕಾರದ ಪಾತ್ರವೂ ಇದೆ ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಅಂಬ್ಲೂರು ರಾಮಕೃಷ್ಣರಾವ್ ಹೇಳಿದರು.

ಕೊಪ್ಪದಲ್ಲಿ ಆ.17ರಂದು ಏರ್ಪಡಿಸಿರುವ ಧರ್ಮಸ್ಥಳ ಷಡ್ಯಂತ್ರ ವಿರುದ್ಧ ಪ್ರತಿಭಟನಾ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಿಂದು ಧರ್ಮದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುಗಳ ಭಾವನೆಗೆ ಧಕ್ಕೆ ತರುವ ಪಿತೂರಿ ನಡೆದಿದೆ ಎಂದರು.

ಗಣೇಶ್ ಹೆಗ್ಡೆ ಮಾತನಾಡಿ, ಕೊಪ್ಪದಲ್ಲಿ ತೀರ್ಥಹಳ್ಳಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ, ಬಸ್‌ನಿಲ್ದಾಣದಲ್ಲಿ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಬಸ್ತಿಮಠದ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.

ಮುಖಂಡರಾದ ಕೆ.ಎಂ.ಶ್ರೀನಿವಾಸ್, ವೇಣುಗೋಪಾಲ್, ಶೃಂಗೇರಿ ಶಿವಣ್ಣ, ನಾಗೇಶ್ ಕಾಮತ್, ಅಂಗುರ್ಡಿ ದಿನೇಶ್, ಸುಮಂಗಲಾ ಆನಂದಸ್ವಾಮಿ, ಮಹಾಬಲ ಭೀಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net