ಭಾಗಶಃ ಮಂಡಿಚಿಪ್ಪು ಮರುಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿ

ಭಾಗಶಃ ಮಂಡಿಚಿಪ್ಪು ಮರುಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿ
Published on

ಹಾಸನ: ಜಿಲ್ಲೆಯಲ್ಲೇ ಮೊದಲ ಬಾರಿಗೆ ನಗರದ ಕರ್ಣ ಆಸ್ಪತ್ರೆಯಲ್ಲಿ ಭಾಗಶಃ ಮಂಡಿಚಿಪ್ಪು ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಅರ್ಜುನ್ ತಿಳಿಸಿದರು.

ಕಳೆದ 8 ವರ್ಷಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಜಯಶ್ರೀ ಅವರು ಬೆಂಗಳೂರು, ಮಂಗಳೂರು ಸೇರಿ ಅನೇಕ ಆಸ್ಪತ್ರೆಗಳನ್ನು ಭೇಟಿ ನೀಡಿದ್ದರು. ವೈದ್ಯರು ಪೂರ್ಣ ಪ್ರಮಾಣದ ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಅವಶ್ಯ ಇದೆ ಎಂದು ತಿಳಿಸಿದ್ದರು. ಆದರೆ, ನಮ್ಮ ಆಸ್ಪತ್ರೆಯ ಡಾ.ಗುರುಪ್ರಸಾದ್ ಅವರು ತಪಾಸಣೆ ನಡೆಸಿ ಯಾವ ಭಾಗದಲ್ಲಿ ಮಂಡಿ ಸವೆದಿತ್ತು. ಆ ಭಾಗದಲ್ಲಿ ಭಾಗಶಃ ಮಂಡಿಚಿಪ್ಪು ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇದೀಗ ಆ ಮಹಿಳೆಗೆ ಮಂಡಿ ನೋವಿನಿಂದ ಪರಿಹಾರ ದೊರೆತಿದ್ದು, ಮೊದಲಿನಂತೆ ಓಡಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಶಸ್ತ್ರ ಚಿಕಿತ್ಸೆಗೆ ಬೆಂಗಳೂರು ಮೊದಲಾದ ಕಡೆಗಳಲ್ಲಿ 3 ರಿಂದ 4 ಲಕ್ಷ ರೂ. ಗೂ ಅಧಿಕ ವೆಚ್ಚ ಆಗಲಿದೆ. ಆದರೆ ನಮ್ಮಲ್ಲಿ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾಗಿ ಮಂಡಿಚಿಪ್ಪು ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇದರ ಚೇತರಿಕೆ ಸಹ ಬೇಗ ಆಗಲಿದೆ. ನಮ್ಮ ಜಿಲ್ಲೆಯ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು, ಕರ್ಣ ಆಸ್ಪತ್ರೆ ಆರಂಭವಾಗಿ ಕೇವಲ 9 ತಿಂಗಳು ಕಳೆದಿದ್ದು, ನರರೋಗ, ಹೃದಯ ಚಿಕಿತ್ಸೆ, ಇತರೆ ಶಸ್ತ್ರ ಚಿಕಿತ್ಸಾ ಸೌಲಭ್ಯವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಜಯಶ್ರೀ, ವೈದ್ಯ ಡಾ.ಗುರುಪ್ರಸಾದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net