

ಹುಲಸೂರು: ಗ್ರಾಮದಲ್ಲಿ ಎಲ್ಲರೂ ಸೇರಿಕೊಂಡು ಮಹಾದೇವ ಮಂದಿರ ನಿರ್ಮಿಸುತ್ತಿರುವುದು ಸಂತಸ ತಂದಿದೆ. ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಶರಣು ಸಲಗರ ಹೇಳಿದ್ದರು.
ತಾಲೂಕಿನ ಕಾದೇಪುರದಲ್ಲಿ ಮಹಾದೇವ ಮಂದಿರ ಕಟ್ಟಡದ ಭೂಮಿಪೂಜೆ ಹಾಗೂ ಶ್ರೀ ಶಿವಲಿಂಗ ಟ್ರಸ್ಟ್ ನಾಮ ಫಲಕದ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾದೇಪುರದ ಗ್ರಾಮಸ್ಥರ ನಿಮ್ಮ ಋಣ ತೀರಿಸುತ್ತೇನೆ. ಗ್ರಾಮದ ಜನರು ನಗರ ಪ್ರದೇಶಗಳಲ್ಲಿ ಉಳಿದು ಉಪಜೀವನ ನಡೆಸಿಕೊಂಡು ಸ್ವ ಗ್ರಾಮದ ಮೇಲೆ ಪ್ರೀತಿ ಇಟ್ಟು ಭವ್ಯ ಮಂದಿರ ನಿರ್ಮಿಸುತ್ತಿರುವುದು ಉತ್ತಮ ಕಾರ್ಯ. ಮಂದಿರ ನಿರ್ಮಾಣಕ್ಕೆ ನನ್ನ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.
ಗ್ರಾಮದಲ್ಲಿ ಬೃಹತ್ ಮಹಾದೇವ ಮಂದಿರ ಸ್ಥಾಪಿಸುತ್ತಿರುವುದು ಹೆಮ್ಮೆಯ ಮಾತಾಗಿದೆ. ನನ್ನದು ಎನ್ನುವುದು ಯಾವುದು ಇಲ್ಲ. ಕೋವಿಡ್ ವೇಳೆ ಶ್ರೀಮಂತರು, ಬಡವರು ಎನ್ನದೆ ಎಲ್ಲರೂ ಜೀವ ಕಳೆದುಕೊಂಡಿದ್ದಾರೆ. ಸಮಾಜದ ಹಿತಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಹುಲಸೂರು ತಾಲೂಕು, ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಮಾತನಾಡಿ, ಕಾದೇಪುರದಲ್ಲಿ ಮಹಾದೇವ ಮಂದಿರ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿರುವುದು ಸಂತೋಷವಾಗಿದೆ. ಭೇದ ಭಾವವಿಲ್ಲದೆ ನಮ್ಮ ಕೈಯಿಂದು ಆದಷ್ಟು ಸಹಾಯ ಮಾಡೋಣ ಎಂದರು.
ಟ್ರಸ್ಟ್ ಪ್ರಮುಖ ಶಿವಪುತ್ರ ಬಿರಾದಾರ, ವಿಶ್ವ ಹಿಂದು ಪರಿಷತ್ ಪ್ರಮುಖ ಶ್ರೀಶೈಲ ವಾತಾಡೆ, ಗುರು ಮಹಾರಾಜ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಟ್ರಸ್ಟ್ ಅಧ್ಯಕ್ಷ ರಾವುಸಾಬ ಬಿರಾದಾರ, ಪ್ರಮುಖರಾದ ರವಿ ನಾವದಗೆ, ದಾದಾರಾವ ಪಾಟೀಲ್, ಸಂತೋಷ , ಶಿವಪುತ್ರ ಬಿರಾದಾರ, ವಿಠಲರಾವ ಬಿರಾದಾರ, ಸಂದೀಪ ಬಿರಾದಾರ, ಶಿವಕುಮಾರ ಪಾಟೀಲ್, ಪ್ರದೀಪ ಬಿರಾದಾರ, ಸುಧಾಕರ ಬಿರಾದಾರ ಇತರರಿದ್ದರು.