ಭವಿಷ್ಯದಲ್ಲಿ ಮಹಿಳೆಯೇ ವಿಶ್ವಕ್ಕೆ ಅಧಿಪತಿ

30Manju12
ಬೆಳಗಾವಿ ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ಸಭಾಗೃಹದಲ್ಲಿ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದ ಸಮಾರೋಪ ಸಮಾರಂಭ ಸೋಮವಾರ ಜರುಗಿತು. ಡಾ.ಲಾರಿ ಆಝಾದ್, ಮೋನೋಮತಿ ಕುರಮಿ, ವಿಜಯಲಕ್ಷ್ಮೀ ಕೋಸಗಿ, ಡಾ.ಸರೋಜಾ ಜಿ.ಎಸ್.ಇತರರಿದ್ದರು.
Published on

ಬೆಳಗಾವಿ: ಭವಿಷ್ಯದ ದಿನಗಳಲ್ಲಿ ವಿಶ್ವದ ಬಹುತೇಕ ದೇಶದಲ್ಲಿ ಮಹಿಳೆಯರೇ ಅಧ್ಯಕ್ಷರು, ಪ್ರಧಾನಮಂತ್ರಿಗಳು ಆಗುತ್ತಾರೆ ಎಂದು ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದ ಸಂಸ್ಥಾಪಕ ಡಾ.ಲಾರಿ ಆಝಾದ್ ಹೇಳಿದರು.

ಇಲ್ಲಿನ ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ಸಭಾಗೃಹದಲ್ಲಿ ಜರುಗಿದ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಆಗಲಿದೆ. ಮಹಿಳೆಯರು ದಿನದಿಂದ ದಿನಕ್ಕೆ ಶಕ್ತಿಶಾಲಿಯಾಗುತ್ತಿದ್ದಾರೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಎಐಪಿಸಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಸ್ಸಾಂನ ಮೋನೋಮತಿ ಕುರಮಿ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೋಸಗಿ, ಮಂಗಲಾ ಮೆಟಗುಡ್ಡ, ಜ್ಯೋತಿ ಬದಾಮಿ, ಡಾ. ಕೆ. ಪಿ. ಸುಧೀರಾ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸರೋಜಾ ಜಿ.ಎಸ್. ಅವರನ್ನು ನೇಮಕ ಮಾಡಲಾಯಿತು. ಎಲ್ಲ ರಾಜ್ಯಗಳಿಂದ ಓರ್ವ ಪ್ರತಿನಿಧಿಯನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ, ಮಿಸ್ ಎಐಪಿಸಿ-2023 ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜತೆಗೆ 2023ನೇ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ಪಂಜಾಬ್ ರಾಜ್ಯದ ಅಮೃತಸರದಲ್ಲಿ ಜರುಗಲಿದೆ ಎಂದು ಘೋಷಣೆ ಮಾಡಲಾಯಿತು.
ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ, ಪಾಲ್ಗುಣಿ ಚಕ್ರವರ್ತಿ, ಡಾ.ಜಾಕ್ಲಿನ್ ಮರಾಕ್, ಅಸರ್ಜಾ ಪ್ರದೀಪ, ಜಹಾನಾರಾ ಬೇಗಂ, ಸುಧಾ ಪಟ್ನಾಯಿಕ್, ಶೈಲಜಾ ಭಿಂಗೆ, ನೀಲಗಂಗಾ ಚರಂತಿಮಠ, ಪ್ರತಿಭಾ ಕಳ್ಳಿಮಠ, ನಂದಾ ಗಾರ್ಗಿ, ಸರ್ವಮಂಗಳಾ ಅರಳಿಮಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net