

ಚಿಕ್ಕಮಗಳೂರು: ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಸಹಕಾರಿ ಎಂದು ಜಿಪಂ ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪ ಗೌಡ ಅಭಿಪ್ರಾಯಪಟ್ಟರು.
ಲಕ್ಯಾಹೋಬಳಿ ಸಿಂದಿಗೆರೆ ಗ್ರಾಮದ ಶ್ರೀರೇವಣಸಿz್ದೆÃಶ್ವರ ವಿದ್ಯಾಸಂಸ್ಥೆಯ ಶ್ರೀಗುರು ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ೨೨ನೆಯ ವಾರ್ಷಿಕೋತ್ಸವ ಮಕ್ಕಳ ಕಲರವ ಉದ್ಘಾಟಿಸಿ ಮಾತನಾಡಿದ ಅವರು, ಹೊಲ-ಗದ್ದೆಗಳಲ್ಲಿ ನಿತ್ಯ ದುಡಿದು ತಿನ್ನುವ ಕೃಷಿಕರು-ಕೃಷಿ ಕಾರ್ಮಿಕರಿಗೆ ಸಹಜವಾಗಿಯೆ ಪೇಟೆÀ ಮಕ್ಕಳಂತೆ ಇಂಗ್ಲೀಷ್ ಶಾಲೆಯಲ್ಲಿ ತಮ್ಮ ಮಕ್ಕಳೂ ಕಲಿತರೆ ಭವಿಷ್ಯ ಉಜ್ವಲವಾಗುತ್ತದೆ ಎಂಬ ಕನಸಿರುತ್ತದೆ. ಆದರೆ ಲಕ್ಷಾಂತರ ರೂ. ವ್ಯಯಿಸುವ ಸ್ಥಿತಿಯಲ್ಲಿಲ್ಲದೆ ಕೊರಗುತ್ತಿದ್ದ ಸಂದರ್ಭದಲ್ಲಿ ಈ ಶಾಲೆ ಆರಂಭಗೊAಡು ಜನರ ಕನಸನ್ನು ನನಸಾಗಿಸುತ್ತಿದೆ ಎಂದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯಮೌಲ್ಯ, ನೈತಿಕಪ್ರಜ್ಞೆ, ಸಾಮಾಜಿಕ ನಡವಳಿಕೆಗಳನ್ನು ಕಲಿಸುವ ಅಗತ್ಯವಿದೆ. ಬದುಕಿನ ಕಷ್ಟ ಸುಖ ಏರಿಳಿತವನ್ನು ಕಂಡುAಡ ಮಕ್ಕಳು ಮುಂದೆ ಎಲ್ಲ ಸಂಕಷ್ಟಗಳನ್ನೂ ಎದುರಿಸುವ ಸಾಮರ್ಥ್ಯ ಹೊಂದುತ್ತಾರೆ. ಇಂದು ಮಕ್ಕಳಿಗೆ ಎಲ್ಲ ಸೌಲಭ್ಯ, ಸೌಕರ್ಯಗಳನ್ನು ಶಕ್ತಿ ಮೀರಿ ಪೋಷಕರು ನೀಡುತ್ತಿದ್ದರೂ, ಅದೇ ಮಕ್ಕಳು ದೊಡ್ಡವರಾದ ನಂತರ ಹಿರಿಯರನ್ನು ನಿರ್ಲಕ್ಷಿಸುತ್ತಿರುವ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ. ಮಕ್ಕಳನ್ನು ಆಗಾಗ ಮನೆಯ ಕೊಟ್ಟಿಗೆಯ, ಜಮೀನಿನ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸುವುದು ಉತ್ತಮ. ಅಂತೆಯೆ ಅನಾಥಾಲಯ, ವೃದ್ಧಾಶ್ರಮ, ಅಂಧಮಕ್ಕಳ ಶಾಲೆಗಳಿಗೆ ಕರೆದೊಯ್ದು ಸಮಾಜದ ಸಂಕಷ್ಟಗಳನ್ನು ಪರಿಚಯಿಸಿದರೆ ಮುಂದೆ ಅವರೂ ಗುರುಹಿರಿಯರು, ತಂದೆತಾಯಿ, ಅಶಕ್ತ ಅಂಗವಿಕಲರಿಗೆ ಆಸರೆಯಾಗುತ್ತಾರೆ. ಸಮಾಜಕ್ಕೆ ಹೊರೆಯಾಗದೆ ಆಸ್ತಿಯಾಗಿ ಊರಿಗೆ ಉಪಕಾರಿಗಳಾಗುತ್ತಾರೆ ಎಂದು ತಿಳಿಸಿದರು.
ಮನುಷ್ಯನ ಜೀವನದಲ್ಲಿ ವಿದ್ಯೆಗೆ ಅಪಾರ ಆದ್ಯತೆ ಇದೆ. ಉತ್ತಮ ಮಾನವನಾಗಿ ರೂಪುಗೊಳ್ಳಲು ಶಿಕ್ಷಣ ಸಹಕಾರಿಯಾಗಬೇಕು. ಸಮಾಜದ ಎಲ್ಲವರ್ಗದ, ಎಲ್ಲ ಪ್ರದೇಶದ ಜನರಿಗೆ ಶಿಕ್ಷಣ ಸರಳ ಹಾಗೂ ಸುಲಭವಾಗಿ ಲಭ್ಯವಾಗಬೇಕು. ಉಳ್ಳವರಿಗಷ್ಟೇ ಉತ್ತಮ ಶಿಕ್ಷಣ ಎಂಬ ಭಾವನೆ ಬದಲಾಗಬೇಕು. ಸಿಂದಿಗೆರೆಯAಥ ಬೆಂಗಾಡಿನ ಮಕ್ಕಳಿಗೆ ಉತ್ತಮ ಇಂಗ್ಲಿಷ್ ಶಾಲೆಯನ್ನು ಆರಂಭಿಸಿ ಛಲದಿಂದ ಎರಡುದಶಕಗಳಿಂದ ಮುನ್ನಡೆಸುತ್ತಿರುವ ಧನಂಜಯ ದಂಪತಿ ಯುವಜನತೆಗೆ ಆದರ್ಶ ಎಂದರು.
ಪಠ್ಯದ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವೂ ಇಲ್ಲಿ ಲಭ್ಯವಾಗುತ್ತಿದೆ. ಸುಲಲಿತವಾಗಿ ಇಂಗ್ಲೀಷ್ ಮಾತನಾಡುವ ಕಲೆಯನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಕ್ರೀಡೆಗೂ ವಿಶೇಷ ಆದ್ಯತೆ ಇದ್ದು, ಈ ಹಳ್ಳಿ ಶಾಲೆಯ ಹರ್ಷಿತಾ ಮತ್ತು ಸುಪ್ರಿಯಾ ಎಂಬ ಬಾಲಕಿಯರಿಬ್ಬರು ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಶಿಕ್ಷಕ ಬಿ.ಸಿ.ಪರಮೇಶ್ವರಪ್ಪ, ಸಮಸ್ಯೆಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಧೈರ್ಯದಿಂದ ಮುನ್ನಡೆದ ಹಿನ್ನಲೆಯಲ್ಲಿ ಪುಟ್ಟಹಳ್ಳಿಯ ಶಾಲೆ ೨೨ವರ್ಷಗಳ ಕಾಲ ನಿರಂತರವಾಗಿ ಮುನ್ನಡೆದು ನೂರಾರು ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಎಂ.ಈ.ನೇತ್ರಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಬಿ.ಎಂ.ಚAದ್ರಶೇಖರ್, ಬೀರೇಗೌಡ, ಕಾರ್ಯದರ್ಶಿ ಧನಂಜಯ ಮತ್ತಿತರರಿದ್ದರು.