

ಸವದತ್ತಿ: ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ ಎಂದು ಮುಖ್ಯ ಶಿಕ ಎಸ್.ವಿ. ಜೋಶಿ ಹೇಳಿದರು. ಪಟ್ಟಣದ ಹನುಮಗೇರಿ ಓಣಿಯಲ್ಲಿನ ಸರ್ಕಾರಿ ಕನ್ನಡ ಮಕ್ಕಳ ಶಾಲೆ ನಂಬರ್ 2ರಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಮೌನೇಶ ಕಂಬಾರ ಹಾಗೂ ಮಹಾಂತೇಶ ಬ್ಯಾಹಟ್ಟಿ ಅವರಿಂದ ನೀಡಲಾದ ವಿಜಯವಾಣಿ ದಿನಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಸರ್ಕಾರಿ ಶಾಲೆಯ ಮಕ್ಕಳು ಪಠ್ಯದ ಜತೆಗೆ ಸ್ಪರ್ಧಾತ್ಮಕ ಪರೀೆ ಎದುರಿಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಉತ್ತಮ ಅಂಕಗಳಿಸಿ ಉನ್ನತ ಶಿಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿ ಮಿತ್ರ ದಾರಿದೀಪವಾಗಿದೆ. ಈ ಮೂಲಕ ಪರೀೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಶಿಕ ಮಹಾಂತೇಶ ಬ್ಯಾಹಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ವಿಜಯವಾಣಿ ದಿನಪತ್ರಿಕೆ ವಿದ್ಯಾರ್ಥಿ ಮಿತ್ರ ಸಂಚಿಕೆ ಹೊರತಂದಿದ್ದು, ಮಕ್ಕಳ ಶೈಕ್ಷಣಿಕ ಸಾಧನೆಗೆ ಸಹಕಾರಿಯಾಗಿದೆ. ಶಾಲೆಯಲ್ಲಿ ಪಾಠ ಬೋಧನೆ ಜತೆಗೆ ಪ್ರತಿಯೊಬ್ಬರೂ ವಿದ್ಯಾರ್ಥಿ ಮಿತ್ರ ಓದುವುದರಿಂದ ಪರೀೆಗೆ ಅನುಕೂಲವಾಗಲಿದೆ. ಮಕ್ಕಳು ಮೊಬೆಲ್ ಬಿಟ್ಟು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಮಿತ್ರ ಸಂಚಿಕೆಯ ಉಚಿತ ವಿತರಣೆಯನ್ನು ಕಳೆದ ನಾಲ್ಕು ವಾರಗಳಿಂದ ನಿರಂತರವಾಗಿ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ನೀಡಲಾಗುತ್ತಿದೆ. ತಾಲೂಕಿನ ಆಯ್ದ ಸರ್ಕಾರಿ ಶಾಲೆಗಳ 1,500 ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆ ತಲುಪಿಸಲಾಯಿತು. ಶಿವಾನಂದ ಯಡ್ರಾಮಿ, ಸಂಗಮೇಶ ಕಳ್ಳಿಮಠ, ಆರ್.ಎಸ್. ಹೆಬಸೂರ್, ಪ್ರಕಾಶ್ ಹೇಮರಡಿ, ನಾಗಪ್ಪ ಬಂದ್ರೋಳಿ, ಗದಿಗೆಪ್ಪ ಕಿತ್ತೂರ ಇತರರು ಇದ್ದರು.