

ಔರಾದ್: ತಾಲೂಕಿನ ಆಲೂರ್(ಕೆ) ಗ್ರಾಮದಲ್ಲಿರುವ ಜೈ ಭವಾನಿ ಮಂದಿರದ 4ನೇ ವಾರ್ಷಿಕೋತ್ಸವ ಡಿ.15ರಂದು ದತ್ತ ಹುಣ್ಣಿಮೆ ಶುಭ ಸಂದರ್ಭದಲ್ಲಿ ನಡೆಯಲಿದೆ. ಬೆಳಗ್ಗೆ 9ಕ್ಕೆ ಭವಾನಿ ಮಾತೆಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ ನಡೆಯಲಿದೆ.
10ಕ್ಕೆ ಹೋಮ, ಯಜ್ಞ ಜರುಗಲಿದೆ. ಸಂಜೆ 4ಕ್ಕೆ ಮಹಿಳಾ ತಂಡಗಳಿಂದ ಭಜನೆ ಹಾಗೂ ಸಂಜೆ 6ಕ್ಕೆ ಗ್ರಾಮದಲ್ಲಿ ಮಾತೆಯ ಉತ್ಸವ ಮೂರ್ತಿಯೊಂದಿಗೆ ವೈಭವದಿಂದ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಪಲ್ಲಕ್ಕಿ ಮಂದಿರಕ್ಕೆ ತಲುಪಿದ ಬಳಿಕ ತಾಯಿಯ ಗೋಂಧಳಿ ನಡೆಯಲಿದೆ. ನಂತರ ರಾತ್ರಿಯಿಡಿ ಶಿವಭಜನೆ ಇದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾತೆಯ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕು ಎಂದು ಮಂದಿರದ ಮುಖ್ಯ ಪೂಜಾರಿ ಈರಣ್ಣ ಗುಂಡಪ್ಪ ದುನಗೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.