ಭರ್ಜರಿ ವ್ಯಾಪಾರ ನಡೆಸಿದ ವಿದ್ಯಾರ್ಥಿಗಳು

19 gkp 03
ಗೋಣಿಕೊಪ್ಪ ಕಾವೇರಿ ಕಾಲೇಜು ವಾಣಿಜ್ಯ ವಿಭಾಗದಿಂದ ಪರಿಮಳ ಮಂಗಳ ವಿಹಾರದಲ್ಲಿ ಆಯೋಜಿಸಿದ್ದ ಮೇಳದಲ್ಲಿ ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು.
Published on

ಗೋಣಿಕೊಪ್ಪ: ಕಾವೇರಿ ಕಾಲೇಜು ವಾಣಿಜ್ಯ ವಿಭಾಗದಿಂದ ಪರಿಮಳಾ ಮಂಗಳ ವಿಹಾರದಲ್ಲಿ ಸೋಮವಾರ ಆಯೋಜಿಸಿದ್ದ ಸ್ವ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳು ವ್ಯಾಪಾರ ನಡೆಸಿ ಸಂಭ್ರಮಿಸಿದರು.
ತಿಂಡಿ, ತಿನಿಸು, ಗಿಡಗಳ ಮಾರಾಟ, ಬಟ್ಟೆ, ಶೂ,ಚಪ್ಪಲಿ ಸೇರಿದಂತೆ ನೂರಾರು ಬಗೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಸಾರ್ವಜನಿಕರು ಪಾಲ್ಗೊಂಡು ಖರೀದಿಸಿದರು. ಮನೆಯಲ್ಲೇ ತಯಾರಿಸಿದ ತಿಂಡಿ, ತಿನಿಸುಗಳನ್ನು ತಂದು ಮಾರಾಟ ಮಾಡಿದರು. ಎರಡು ದಿನದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಲ್ಲೀರ ಜಿ.ಧರ್ಮಜ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಮಾಳೇಟಿರ ಬಿ.ಕಾವೇರಪ್ಪ, ಲಯನ್ಸ್ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲೆ ಕೆ.ಸಿ.ಪವಿತ್ರಾ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ.ನಯನಾ ತಮ್ಮಯ್ಯ, ಕಾರ್ಯಕ್ರಮ ಸಂಚಾಲಕಿ ಬಿ.ಎಸ್.ದೀಪ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net