

ಕಾರ್ಗಲ್: ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಸೌಹಾರ್ದ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ಹೆಜ್ಜೆ ಇರಿಸಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ಪೊಲೀಸ್ ಎನ್ನುವ ಕಾರ್ಯಕ್ರಮ ಆಯೋಜಿಸಿ ಜನರಲ್ಲಿನ ಕುಂದು ಕೊರತೆ ಆಲಿಸಲಿದೆ ಎಂದು ಕಾರ್ಗಲ್ ಪಿಎಸ್‌ಐ ಎಚ್.ಎನ್.ನಾಗರಾಜ್ ಹೇಳಿದರು. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಶನಿವಾರ ಏರ್ಪಡಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪೊಲೀಸರೆಂದರೆ ಜನರಲ್ಲಿರುವ ಭಯ ದೂರವಾಗಿ ಭರವಸೆ ಮೂಡುವಂತಾಗಬೇಕು. ಪೊಲೀಸ್ ಹಾಗೂ ಜನರ ನಡುವೆ ಸಂಬಂಧ ಇನ್ನಷ್ಟು ಹತ್ತಿರವಾಗಬೇಕು. ಈ ನಿಟ್ಟಿನಲ್ಲಿ ಗೃಹ ಸಚಿವರು ಮನೆ ಮನೆಗೆ ಪೊಲೀಸ್ ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪುಗೊಳಿಸಿದ್ದಾರೆ ಎಂದರು. ವಿವಿಧ ಸಂಘ ಸಂಸ್ಥೆಗಳ ಪದಾಕಾರಿಗಳಾದ ಟಿ.ಸುರೇಶ್, ಶರತ್ ಕಾಳಮಂಜಿ, ಸತೀಶ್ ಮಲ್ಲಕ್ಕಿ, ಮನೋಜ್, ರಾಜು, ನಾಗರಾಜ್, ರಾಘವೇಂದ್ರ, ಪೊಲೀಸ್ ಸಿಬ್ಬಂದಿ ರಾಮಣ್ಣ ಗೌಡ, ವಿಜಯೇಂದ್ರ, ಮಲ್ಲಪ್ಪ, ಅಣ್ಣಪ್ಪ, ಓಂ ಪ್ರಕಾಶ್, ದೀಪಾ ಇತರರಿದ್ದರು.