ಭರಮಸಾಗರ ಗ್ರಾಪಂ ಪಿಡಿಒ ಅಮಾನತು

Suspend
Published on

ಚಿತ್ರದುರ್ಗ: ಸಾರ್ವಜನಿಕ ಹಣದ ದುರುಪಯೋಗ, ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ ಆರೋಪದಡಿ ಚಿತ್ರದುರ್ಗ ತಾಲೂಕು ಭರಮಸಾಗರ ಗ್ರಾಪಂ ಪಿಡಿಒ ಶ್ರೀದೇವಿ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಕಾನೂನುಬಾಹಿರವಾಗಿ ಸಾರ್ವಜನಿಕ ವಿರೋಧಿ, ಸರ್ವಾಧಿಕಾರಿ ಧೋರಣೆಯೊಂದಿಗೆ ಕರ್ತವ್ಯ ನಿರ್ವಹಣೆ, ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಗೌರವ ನೀಡದೆ, ಕಚೇರಿ ನೌಕರರು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿರುವುದು. ಸಾರ್ವಜನಿಕರ ಹಣ ದುರ್ಬಳಕೆ ಇತ್ಯಾದಿ ಅಧ್ಯಕ್ಷರು, ಗ್ರಾ.ಪಂ. ಸದಸ್ಯರ ದೂರುಗಳ ಕುರಿತಂತೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಅವರು ವರದಿ ಸಲ್ಲಿಸಿದ್ದರು. 96 ಸಾವಿರ ರೂ.ಗಳಿಗೆ ಸಾರ್ವಜನಿಕರಿಂದ ಶುಲ್ಕ ಪಡೆದು ಮಾರ್ಗಸೂಚಿ ಉಲ್ಲಂಘಿಸಿ ಜನರಲ್ ಲೈಸೆನ್ಸ್ ನೀಡಿರುವುದು ಹಣದ ಆರೋಪ ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ತಿಳಿಸಿದ್ದರು.
ಈ ಆರೋಪಗಳ ಕುರಿತಂತೆ ನೀಡಿದ್ದ ನೋಟಿಸ್‌ಗೆ,ಶ್ರೀದೇವಿ ಅವರು ನೀಡಿರುವ ಸಮಜಾಯಿಷಿ ಅಸಮಂಜಸವಾಗಿರುವುದರಿಂದ ನಿಯಮಾನುಸಾರ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net