ಭರತೇಶ ಪ್ರೌಢಶಾಲೆಯಲ್ಲಿ ಕರೊನಾ ತಡೆ ಜಾಗೃತಿ

30Ravig1
ಬೆಲ್ಲದ ಬಾಗೇವಾಡಿಯ ಭರತೇಶ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಎಂ.ಎಸ್.ಮುನ್ನೋಳಿ, ಡಿ.ಡಿ.ದೇಸಾಯಿ, ವಿಜಯಕುಮಾರ ಹತ್ತರಕಿ, ಬಿ.ಕೆ.ಸಪ್ತಸಾಗರ, ಬಿ.ಎ.ಚೌಗಲಾ, ಡಾ.ಸಂಪತ್ ಗೋಕಾವಿ, ರಾಜಶೇಖರ ಪಾಟೀಲ ಇದ್ದರು.
Published on

ಬೆಳಗಾವಿ: ಡಾ.ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರ ಮತ್ತು ವಿಕಾಸನ ಕೇಂದ್ರ, ಭರತೇಶ ಇಕೋ ಕ್ಲಬ್ ವತಿಯಿಂದ ಬೆಲ್ಲದ ಬಾಗೇವಾಡಿಯ ಭರತೇಶ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲೆ ವಿಭಾಗದಲ್ಲಿ ಗುರುವಾರ ಕರೊನಾ ತಡೆ ಜಾಗೃತಿ ಕಾರ್ಯಕ್ರಮ ಜರುಗಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ಎಂ.ಎಸ್.ಮುನ್ನೋಳಿ, ಡಿ.ಡಿ.ದೇಸಾಯಿ, ಆರೋಗ್ಯ ಶಿಕ್ಷಣಾಧಿಕಾರಿ ವಿಜಯಕುಮಾರ ಹತ್ತರಕಿ, ಬಿ.ಕೆ.ಸಪ್ತಸಾಗರ, ಬಿ.ಎ.ಚೌಗಲಾ, ಡಾ.ಸಂಪತ್ ಗೋಕಾವಿ, ರಾಜಶೇಖರ ಪಾಟೀಲ, ಎಂ.ಎಸ್.ಹವಲೆ ಇತರರು ಪಾಲ್ಗೊಂಡಿದ್ದರು. ಕವಿತಾ ಮುನ್ನೋಳಿ ನಿರೂಪಿಸಿದರು. ವಿ.ಡಿ.ಹಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net