ಭರತನಾಟ್ಯ ಸಂಸ್ಕಾರ ಕಲಿಸುವ ಕಲೆ

kdr sanmana
ಕಡೂರು ಶ್ರೀ ನಾಟ್ಯ ಕೇಶವ ನೃತ್ಯ ಕಲಾನಿಕೇತನ ಭರತ ನಾಟ್ಯ ಶಾಲೆಯಿಂದ ಏರ್ಪಡಿಸಿದ್ದ ಗುರುಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಕೇಶವಕುಮಾರ್ ಪಿಳ್ಳೈ ಮತ್ತು ಚೇತನ್ ಅವರನ್ನು ಗೌರವಿಸಲಾಯಿತು. ಡಾ. ನಿರ್ಮಲಾ, ಉಷಾ ಪದ್ದಣ್ಣ, ಆಶಾ ಶ್ರೀನಿವಾಸ್, ಸುಜಾತಾ ಶಿವಕುಮಾರ್, ಶೋಭಾ ಮತ್ತಿತರರಿದ್ದರು.
Published on

ಕಡೂರು: ಭಾರತದ ಪ್ರಾಚೀನ ನೃತ್ಯ ಭರತನಾಟ್ಯ ಮಕ್ಕಳಿಗೆ ಸಂಸ್ಕಾರ ಕಲಿಸುವ ಕಲೆ ಎಂದು ವಿದ್ವಾನ್ ಡಾ. ಕೇಶವಕುಮಾರ್ ಪಿಳ್ಳೈ ಅಭಿಪ್ರಾಯಪಟ್ಟರು.

ಶಾಸಕರ ಮಾದರಿ ಶಾಲೆಯಲ್ಲಿ ಶನಿವಾರ ಶ್ರೀ ನಾಟ್ಯ ಕೇಶವ ನೃತ್ಯ ಕಲಾನಿಕೇತನ ಭರತ ನಾಟ್ಯ ಶಾಲೆಯಿಂದ ಏರ್ಪಡಿಸಿದ್ದ ಗುರುಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಸಂಸ್ಕಾರಯುತ ಕಲೆಗಳ ಅಭ್ಯಾಸ ಮಾಡುವುದು ಮುಖ್ಯ. ಕೇಶವ ನೃತ್ಯ ಕಲಾನಿಕೇತನವು ಪಟ್ಟಣದಲ್ಲಿ 11ನೇ ವರ್ಷದತ್ತ ಹೆಜ್ಜೆ ಹಾಕುತ್ತಿದೆ. ಮುಂದಿನ ದಿನಗಳಲ್ಲಿ ದಶಮಾನೋತ್ಸವ ಆಚರಿಸಲಿದೆ ಎಂದರು. ಕಲಾನಿಕೇತನ ಶಾಲೆಯ ಭರತನಾಟ್ಯ ಕಲೆಯ ಮಕ್ಕಳು ಸಾಮೂಹಿಕವಾಗಿ ಗುರುಪೂಜೆ ಸಲ್ಲಿಸಿದರು. ಡಾ. ನಿರ್ಮಲಾ, ಉಷಾ ಪದ್ದಣ್ಣ, ಜೆಸಿಐ ಸ್ವರ್ಣಶ್ರೀ ಘಟಕದ ಅಧ್ಯಕ್ಷೆ ಆಶಾ ಶ್ರೀನಿವಾಸ್, ಸುಜಾತಾ ಶಿವಕುಮಾರ್, ಮುಖ್ಯಶಿಕ್ಷಕಿ ರುಕ್ಮಿಣಿ, ಎಸ್‌ಡಿಎಂಸಿ ಅಧ್ಯಕ್ಷ ಪಂಗ್ಲಿ ಮಂಜುನಾಥ್, ಶಿಕ್ಷಕಿ ಶೋಭಾ, ಭರತನಾಟ್ಯ ಕಲೆ ತರಬೇತುದಾರ ಚೇತನ್, ಮೀನಾಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net