

ಕಲಬುರಗಿ: ಸಂಗೀತ ಸಾಹಿತ್ಯ ಮತ್ತು ಸಾಂಸ್ಕೃತಿಕ ಕರ‍್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಭರತನಾಟ್ಯವು ಭಾರತೀಯ ಸಂಸತಿ ಎತ್ತಿ ಹಿಡಿಯುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯಶೋಧ ಕಟಕೆ ಹೇಳಿದರು.
ನಗರದ ತೇಲ್ಕರ್ ಕಾಲನಿಯಲ್ಲಿ ಪ್ರಿಯಾ ನೃತ್ಯಾಲಯ ಕಲಾ ಸಂಸ್ಥೆ ರ‍್ಪಡಿಸಿದ್ದ ಸಾಂಸತಿಕ ಕರ‍್ಯಕ್ರಮ ತಾಂಬೂಲು ಪೂಜೆ ಹಾಗೂ ಗೆಜ್ಜೆಪೂಜೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಿಯಾ ನೃತ್ಯಾಲಯ ಕಲಾ ಸಂಸ್ಥೆ ಅಧ್ಯಕ್ಷೆ ಜ್ಯೋತಿ ಹಂಚಾಟೆ ಮಾತನಾಡಿ, ಮಕ್ಕಳ ರ‍್ವಾಂಗೀಣ ಅಭಿವೃದ್ಧಿಗೆ ಸಾಂಸ್ಕೃತಿಕ ಕರ‍್ಯಕ್ರಮಗಳು ಪೂರಕವಾಗುತ್ತವೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ ಸಾಹಿತ್ಯ ಮತ್ತು ಸಾಂಸತಿಕ ಕರ‍್ಯಕ್ರಮಗಳಿಗೆ ಇಂದಿನ ಯುವ ಪೀಳಿಗೆ ಹೆಚ್ಚಿನ ಗಮನ ಕೊಡಬೇಕೆಂದು ಹೇಳಿದರು.
ತ್ರಿಶಾ ಏಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಅಶ್ವಿನಿಕುಮಾರ ಸಿಂಗ್ ಮಾತನಾಡಿ, ಸಂಗೀತ ಆಲಿಕೆಯಿಂದ ಮನುಷ್ಯನ ಆಯುಷ್ಯ ಹೆಚ್ಚುತ್ತದೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ಹೇಳಿದರು.
ಮಕ್ಕಳಿಗೆ ಅಭಿನಂದನಾ ಪತ್ರಗಳನ್ನು ವಿಸ್ತರಿಸಲಾಯಿತು. ಎಲ್ಲ ಮಕ್ಕಳಿಂದ ಸಂಗೀತ ಮತ್ತು ಸಾಂಸ್ಕೃತಿಕ ಕರ‍್ಯಕ್ರಮ ನಡೆಸಿಕೊಡಲಾಯಿತು. ಮಿಲಿಂದ್ ಪಿ ತೇಲ್ಕರ, ರವೀಂದ್ರ ಕುಲರ‍್ಣಿ, ಅಕ್ಷಯ, ಜ್ಯೋತಿ, ರಾಜಕುಮಾರ ಗದ್ದಾಳೆ, ಕೃಷ್ಣಾ ಹಂಚಾಟೆ, ಕಿರಣ ಕುಲ್ರ‍್ಣಿ, ವಿಶಾಲ ಗದ್ದಾಳೆ ಇತರರಿದ್ದರು.