ಭಯ ಬೇಡ ಜಾಗೃತಿ ಇರಲಿ

BDR4
ಔರಾದ್ ತಾಲೂಕಿನ ಜೋಜನಾ ಗ್ರಾಮದಲ್ಲಿ ಡೆಂಘೆ ಕುರಿತು ಜಾಗೃತಿ ಮೂಡಿಸಲಾಯಿತು. ಖಾದರ್ ಖಾನ್, ತಸ್ಲೀಮ್, ಶೋಭಾ ಇತರರಿದ್ದರು.
Published on

ಔರಾದ್: ಡೆಂಘೆ ಸೇರಿದಂತೆ ಸಾಂಕ್ರಾಮಿಕ ಕಾಯಿಲೆ ಬಗ್ಗೆ ಜನರು ಭಯಪಡದೆ ಮುಂಜಾಗ್ರತೆ ವಹಿಸಬೇಕು ಎಂದು ವಡಗಾಂವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒ ಖಾದರ್ ಖಾನ್ ಹೇಳಿದರು.

ತಾಲೂಕಿನ ಜೋಜನಾ ಗ್ರಾಮದಲ್ಲಿ ಶುಕ್ರವಾರ ಡೆಂಘೆ ಕುರಿತು ಪ್ರತಿ ಮನೆಗೆ ಭೇಟಿ ನೀಡಿ ಜಾಗÊತಿ ಮೂಡಿಸಿ ಮಾತನಾಡಿ, ಡೆಂಘೆ ಜ್ವರ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಒಂದು ವೈರಸ್ ಕಾಯಿಲೆ. ಇದಕ್ಕೆ ನಿಖರವಾದ ಔಷಧ ಇಲ್ಲ. ಬಹು ಔಷಧದಿಂದ ಗುಣಪಡಿಸಬಹುದು. ಹೀಗಾಗಿ ರೋಗ ತಡೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಇದ್ದಕ್ಕಿದAತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖAಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಎಂದು ಡೆಂಘೆ ರೋಗದ ಲP್ಷÀಣಗಳು ಎಂದು ಹೇಳಿದರು.

ಡೆಂಘೆ ರೋಗದ ರP್ಷÀಣೆಗೆ ಮುಂಜಾಗÊತ ಕ್ರಮವಾಗಿ ಮನೆ, ಮೇಲ್ಛಾವಣಿ, ನೀರಿನ ತೊಟ್ಟಿ, ಒಡೆದ ಬಾಟಲಿ, ಟೈರ್ ಸೇರಿದಂತೆ ಇನ್ನಿತರ ನೀರು ಸಂಗ್ರಹವಾಗುವ ವಸ್ತುಗಳನ್ನು ಹೆಚ್ಚಿನ ದಿನಗಳಿಂದ ನೀರು ಸಂಗ್ರಹವಾಗದAತೆ ಮುಂಜಾಗÊತಿ ವಹಿಸಬೇಕು ಎಂದರು.
ತಸ್ಲೀಮ್, ಶೋಭಾ, ಶಾರದಾ, ಜೈಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net