

ಕಮಲಾಪುರ: ಕುರಿಕೋಟಾ ಗ್ರಾಮದಲ್ಲಿ ಮಂಗಗಳ ದಾಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಯಾರೊಬ್ಬರೂ ಭಯ ಪಡುವ ಅಗತ್ಯವಿಲ್ಲ, ನಿಮ್ಮೊಂದಿಗೆ ಇಲಾಖೆಯಿದೆ ಎಂದು ಉಪ ವಲಯ ಅಧಿಕಾರಿ ಶರಣಗೌಡ ಧೈರ್ಯ ಹೇಳಿದರು.
ಕುರಿಕೋಟಾ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಮಂಗಗಳ ದಾಳಿಯಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಅವರು, ಶೀಘ್ರ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ, ಜನರಿಗೆ ತೊಂದರೆ ಕೊಡುತ್ತಿರುವ ಮಂಗಗಳನ್ನು ಹಿಡಿಯಲಾಗುವುದು. ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿರುವ ಕಪಿಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಂಗಗಳ ಕಡಿತದಿಂದ ಗಾಯಗೊಂಡಿರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಿಲ್‌ನ ಪ್ರತಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಸಮರ್ಪಕ ಅರ್ಜಿ ಸಲ್ಲಿಸಿದರೆ ಇಲಾಖೆಯಿಂದ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ. ಮಂಗಗಳನ್ನು ಹಿಡಿಯುವ ಖಾಸಗಿ ಸಿಬ್ಬಂದಿ ಲಭ್ಯರಿz್ದÁರೆ. ಆದರೆ ಇದಕ್ಕಾಗಿ ಯಾವುದೇ ಅನುದಾನವಿಲ್ಲ, ಗ್ರಾಮ ಪಂಚಾಯಿತಿ ಸಹಕಾರ ನೀಡಿದರೆ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದರು.
ಮತ್ತೊಬ್ಬನ ಮೇಲೆ ದಾಳಿ: ಕುರಿಕೋಟಾ ಗ್ರಾಮದಲ್ಲಿ ಮಂಗಗಳ ಉಪಟಳ ದಿನ ಕಳೆದಂತೆ ಹೆಚ್ಚಾಗುತ್ತಲೆ ಇದೆ. ಇತ್ತ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿರುವಾಗಲೇ ಕಪಿಯೊಂದು ಗ್ರಾಮದ ರಮೇಶ ಡೋಣಿ ಎಂಬುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಇದರೊಂದಿಗೆ ಬರೋಬ್ಬರಿ 11 ಜನರ ಮೇಲೆ ಕಪಿಗಳು ದಾಳಿ ಮಾಡಿದಂತಾಗಿದೆ.