

ಚಿತ್ರದುರ್ಗ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು,ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಲ್ಲಿ ಶುಕ್ರವಾರ ಪರಸ್ಪರ ಭೇಟಿ ಮಾಡಿ ಚರ್ಚಿಸಿದರು. ತರೀಕೆರೆ ವೈ ಜಂಕ್ಷನ್ ಹಾಗೂ ಅಬ್ಬಿಹೊಳಲು ಬ ಳಿಯ ಕಾಮಗಾರಿಗಳ ಪ್ರಗತಿ ಕುರಿತಂತೆ ಇಬ್ಬರು ಮಂತ್ರಿಗಳು ಸಮಾಲೋಚನೆ ನಡೆಸಿದರು.
ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ಡಿಸಿಎಂ ದೂರವಾಣಿ ಕರೆ ಮಾಡಿ ಅಬ್ಬಿನಹೊಳಲು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸಲು ಅಗತ್ಯವಿರುವ ಕ್ರಮಗಳನ್ನು ವಹಿಸಿ,ಪ್ರಗತಿಯ ಮಾಹಿತಿ ನೀಡುವಂತೆ ಸೂಚಿಸಿದರು. ಪಾವಗಡ ತಾಲೂಕಿನ ಕುಡಿಯುವ ನೀರು ಯೋಜನೆ ಹಾಗೂ ಹಿರಿಯೂರಿನ ವಿವಿ ಸಾ ಗರ ಜಲಾಶಯ ಮತ್ತು ನಾಲಾ ಅಭಿವೃದ್ಧಿಗೆ 740 ಕೋಟಿ ರೂ.ಬಿಡುಗಡೆ ಆಗಿದೆ. ಡಿಪಿಆರ್ ಸೇರಿದಂತೆ ಈ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಪ್ರಕ್ರಿಯೆಗಳ ಕುರಿತಂತೆ ಸಚಿವರು ಚರ್ಚಿಸಿದರು. ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿ ಸಣ್ಣಚಿತ್ತಯ್ಯ ಇದ್ದರು.