ಭದ್ರಾವತಿಯಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ

BDVT WEB 1
Published on

ಭದ್ರಾವತಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹಳೇನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ, 2.15 ಕೆ.ಜಿ. ಒಣ ಗಾಂಜಾ, 800 ರೂ. ನಗದು, 3 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಲಾದ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಅಮೀರ್‌ಜಾನ್ ಕಾಲನಿಯ ಮೊಹಮ್ಮದ್ ಖಾಲಿದ್(21), ಸೀಗೇಬಾಗಿಯ ಮೊಹಮ್ಮದ್ ಸಾಹಿಲ್(18), ಸಯ್ಯದ್ ಅರ್ಭಾಜ್(26), ಅನ್ವರ್ ಕಾಲನಿಯ ಮೊಹಮ್ಮದ್ ಅರ್ಶನ್(23) ಬಂಧಿತರು. ಎಎಸ್‌ಪಿ ಜಿತೇಂದ್ರ ದಯಾಮಾ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ನೇತೃತ್ವದ ಹಳೇನಗರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net