ಭದ್ರಾವತಿ: ಹೊಸಸೇತುವೆ ಮತ್ತೆ ಮುಳುಗಡೆ

BDVT WEB
Published on

ಭದ್ರಾವತಿ: ಭದ್ರಾ ಜಲಾಶಯದ ಒಳಹರಿವು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ 41 ಸಾವಿರ ಕ್ಯೂಸೆಕ್ಸ್ ನೀರು ಭದ್ರಾನದಿಗೆ ಹರಿಯಬಿಡಲಾಗಿದ್ದು, ನಗರದ ಹೊಸಸೇತುವೆ ಮೇಲೆ ನೀರು ಹರಿದುಬರುತ್ತಿದೆ.

ಹೊಸಸೇತುವೆ ಮೇಲಿನ ರಸ್ತೆ ಸಂಚಾರ ಸಂಪೂರ್ಣ ನಿಷೇಧಿಸಿರುವ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹೊರ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾದಲ್ಲಿ ಕವಲಗುಂದಿ, ಅಂಬೇಡ್ಕರ್ ಕಾಲನಿ, ಯಕೀನ್ ಶಾ ಕಾಲನಿ ಸೇರಿದಂತೆ ನದಿ ಪಾತ್ರದ ಜನರನ್ನು ಮತ್ತೊಮ್ಮೆ ನೆಮ್ಮದಿ ಕೇಂದ್ರಕ್ಕೆ ಸ್ಥಳಾಂತರಿಸಲು ನಗರಸಭೆ ಹಾಗೂ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೇತುವೆ ಮೇಲೆ ನೀರು ಹರಿಯುವುದು ಹಾಗೂ ನಿಲ್ಲುವ ಪ್ರಕ್ರಿಯೆ ನಿತ್ಯ ನಡೆಯುತ್ತಿದೆ. ತಾಲೂಕು ಆಡಳಿತ, ನಗರಸಭೆ ಹಾಗೂ ಸಂಚಾರ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಬ್ಯಾರಿಕೇಡ್ ರಸ್ತೆಗೆ ಎಳೆಯುವ ಹಾಗೂ ಸೈಡಿಗೆ ಸರಿಸುವ ಕೆಲಸವಂತೂ ನಿತ್ಯ ಕಾಯಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net