ಭದ್ರಾವತಿ: ಮಳೆಯಿಂದ ಧರೆಗುರುಳಿದ ತೆಂಗಿನಮರ

BDVT WEBBB
Published on

ಭದ್ರಾವತಿ: ನಗರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಚನ್ನಗಿರಿ ರಸ್ತೆಯ ಮನೆಯೊಂದರ ಕಾಂಪೌಂಡ್‌ನೊಳಗಿದ್ದ ತೆಂಗಿನ ಮರ ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿದ್ದು ಕಾಂಪೌಂಡ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೆ ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿ ಸರಿಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net