ಭದ್ರಾವತಿ: ತಂದೆಯ ತಿಥಿಗೆ ಬಂದಿದ್ದ ಮಗ ನೀರುಪಾಲು

WWWEEEEB BDVT
Published on

ಭದ್ರಾವತಿ: ತಂದೆಯ ತಿಥಿ ಕಾರ್ಯಕ್ಕೆ ಬಂದಿದ್ದ ಮಗ ಭದ್ರಾ ನಾಲೆಗೆ ಬಿದ್ದು ನೀರು ಪಾಲಾಗಿದ್ದಾರೆ. ಹೊಸಸಿದ್ದಾಪುರದ ಮಾಧವನ್(55) ನೀರುಪಾಲಾದವರು. ಕಳೆದ ಕೆಲ ದಿನಗಳ ಹಿಂದೆ ಮಾಧವನ್ ತಂದೆ ನಿಧನರಾಗಿದ್ದರು. ಬೆಂಗಳೂರಿನಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಿದ್ದ ಮಾಧವನ್ ತನ್ನ ತಂದೆ ನಿಧನ ಹಿನ್ನೆಲೆಯಲ್ಲಿ ಭದ್ರಾವತಿಯ ಹೊಸಸಿದ್ದಾಪುರಕ್ಕೆ ಬಂದಿದ್ದರು, ತಂದೆಯ ತಿಥಿ ಕಾರ್ಯ ಮುಗಿಸಿ ಮನೆಯಲ್ಲಿದ್ದ ಇತರ ಸದಸ್ಯರೊಂದಿಗೆ ಬಟ್ಟೆ ಒಗೆಯಲು ಭಾನುವಾರ ಮಧ್ಯಾಹ್ನ ಹೊಸ ನಂಜಾಪುರದ ಭದ್ರಾ ನಾಲೆಗೆ ಹೋಗಿದ್ದು ಆಗ ನಾಲೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ದಡದಲ್ಲಿದ್ದ ಮತ್ತೋರ್ವ ಸಹೋದರ ಅವರನ್ನು ರಕ್ಷಿಸಲು ಪ್ರಯತ್ನಪಟ್ಟರಾದರೂ ಸಾಧ್ಯವಾಗಲಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೋಟ್ ಸಹಾಯದಿಂದ ಹುಡುಕಾಟ ನಡೆಸಿದರಾದರೂ ಪತ್ತೆಯಾಗಿಲ್ಲ. ಸೋಮವಾರವೂ ಹುಡುಕಾಟ ನಡೆದಿದೆ. ಮಾಧವನ್ ಅವರಿಗೆ ಈಜು ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೂ ಆ ಸಂದರ್ಭದಲ್ಲಿ ಹೃದಯಾಘಾತವಾಗಿರಬಹುದು ಎಂಬ ಅನುಮಾನ ಕುಟುಂಬ ಸದಸ್ಯರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net