ಭದ್ರಾವತಿ: ಅಯ್ಯಪ್ಪಸ್ವಾಮಿ ದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

BDVT WEEEEBB
Published on

ಭದ್ರಾವತಿ: ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 51ನೇ ವರ್ಷದ 3 ದಿನಗಳ ಅಯ್ಯಪ್ಪಸ್ವಾಮಿ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು, ಸಮಿತಿ ಅಧ್ಯಕ್ಷ ಎಸ್.ಜಯಕೃಷ್ಣ ಗುರುವಾರ ಧ್ವಜಾರೋಹಣ ನೆರವೇರಿಸುವುದರ ಮೂಲಕ ದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಬೆಳಗ್ಗೆ ನಿರ್ಮಾಲ್ಯ ದರ್ಶನಂ, ಮಹಾಗಣಪತಿ ಹೋಮ, ಅಷ್ಟಾಭಿಷೇಕ, ಕಳಸ ಪೂಜೆ, ಕಳಸಾಭಿಷೇಕ, ಸಂಜೆ ಅಲಂಕಾರ, ದೀಪಾರಾಧನೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.

ಡಿ.30ರಂದು ಬೆಳಗ್ಗೆ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ನಂತರ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ, ಅಯ್ಯಪ್ಪಸ್ವಾಮಿಗೆ ಕಳಸಾಭಿಷೇಕ, ಭಗವತಿಗೆ ಕುಂಕುಮಾಭಿಷೇಕ, ಶಿವನಿಗೆ ಭಸ್ಮಾಭಿಷೇಕ, ಸಂಜೆ ಭಗವತಿ ಸೇವೆ, ದೀಪಾರಾಧನೆ, ರಾತ್ರಿ ಅತ್ತಾಳ ಪೂಜೆ ನಡೆಯಲಿದೆ.

ಡಿ.31ರಂದು ಬೆಳಗ್ಗೆ ಮಹಾಗಣಪತಿ ಹೋಮ, ಅಯ್ಯಪ್ಪಸ್ವಾಮಿ ಹಾಗೂ ಭಗವತಿಗೆ ಚಂದನಾಲಂಕಾರ, ಹೂವಿನ ಅಭಿಷೇಕ, ಮಧ್ಯಾಹ್ನ 12ಕ್ಕೆ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net