

ಮಧುಗಿರಿ: ಭದ್ರಾ ಮೇಲ್ದಂಡೆ ಯೋಜನೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದು, ಈ ಯೋಜನೆಯಿಂದ ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲೂಕುಗಳಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾಜಿಕ ಅಧಿಕಾರಿತಾ ಶಿಬಿರ, ಕೇಂದ್ರ ಸರ್ಕಾರದ ವಿಶೇಷ ಎಐಡಿಪಿ ಯೋಜನೆಯಡಿ ವಿಕಲ ಚೇತನರಿಗೆ ಉಚಿತ ಸಲಕರಣೆ ವಿತರಣೆ ಮತ್ತು ಸಾರ್ವಜನಿಕ ಕುಂದು&ಕೊರತೆ ಸಭೆ ಉದ್ಘಾಟಿಸಿ ಮಾತನಾಡಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆಗೂ ವಿಸ್ತರಿಸಲಾಗುವುದು. ಜತೆಯಲ್ಲಿ ಗೋವಿಂದ ಕಾರಜೋಳ ಅವರ ೇತ್ರವಾದ ಶಿರಾ ಮತ್ತು ಪಾವಗಡ ೇತ್ರಗಳಿಗೂ ಭದ್ರಾಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಕೇಂದ್ರ ಜನಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕೋಲಾರ ಜಿಲ್ಲೆಗೂ ಈ ಯೋಜನೆ ವಿಸ್ತರಿಸಲು ಮನವಿ ಮಾಡಿದ್ದು, ತಾಂತ್ರಿಕ ಸಲಹೆ ಪಡೆಯಲಾಗುವುದು ಎಂದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಇದ್ದಾಗ ಏನಾದರೂ ಸಮಾಜಕ್ಕೆ ಕೊಡುಗೆ ನೀಡಬೇಕು. ಬಿಜೆಪಿ ಸರ್ಕಾರದವರು ಸುಳ್ಳು ಹೇಳುತ್ತಾರೆ ಎಂದು ಅಪವಾದ ಮಾಡುತ್ತಾರೆ. ಆದರೆ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಪ್ರಚಾರ ಪಡೆದುಕೊಂಡಿಲ್ಲ ಅಷ್ಟೇ ಎಂದರು.
ಜಿಲ್ಲೆಯಲ್ಲಿ 46 ಸಾವಿರ ಅಂಗವಿಕಲರಿದ್ದು, ಇವರಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಸಾಧನ ಸಲಕರಣೆ ವಿತರಿಸಲಾಗುತ್ತಿದೆ. 75 ವರ್ಷಗಳ ನಂತರ ಪ್ರಧಾನಿ ಮೋದಿ ಸರ್ಕಾರ ಅಂಗವಿಕಲರಿಗೆ ಆದ್ಯತೆ ನೀಡಿದ್ದು, ಇವರ ಗೌರವಧನವನ್ನು ಕೇಂದ್ರ ಸರ್ಕಾರ 1400 ರೂ.ಗೆ ಏರಿಕೆ ಮಾಡಿ ೂಷಿಸಿದೆ. ಅಂಗವಿಕಲರಿಗೆ 2016ರಿಂದ ಸರ್ಕಾರಿ ಉದ್ಯೋಗದಲ್ಲಿ ಶೇ.6 ಮೀಸಲಾತಿ ನೀಡಲಾಗಿದೆ. 563.85 ಕೋಟಿ ರೂ. ನಿಗದಿಪಡಿಸಿ 1341 ಕಟ್ಟಡ ನಿರ್ಮಿಸಿ ಅನುಕೂಲ ಮಾಡಿಕೊಡಲಾಗಿದೆ. ದೇಶಾದ್ಯಂತ 8 ಲ ಶಾಲೆಗಳಲ್ಲಿ ಅಂಗವಿಕಲರಿಗೆ ಅನುಕೂಲ ಮಾಡಿಕೊಡಲಾಗಿದೆ. ಶೈಣಿಕ ಸಬಲೀಕರಣದಲ್ಲಿ 879 ಕೋಟಿ ಮೀಸಲು, ಕೌಶಲಾಭಿವೃದ್ಧಿ ಯೋಜನೆಯಡಿ 1.40 ಲ ಅಂಗವಿಕಲರಿಗೆ ತರಬೇತಿ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 46,500 ಅಂಗವಿಕಲರನ್ನು ಗುರುತಿಸಿ, ಗುರುತಿನ ಚೀಟಿ ನೀಡಲಾಗಿದೆ. ಗ್ವಾಲಿಯರ್ನಲ್ಲಿ ಅಂಗವಿಕಲರಿಗಾಗಿಯೇ 189 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. 5 ಸಾವಿರ ಶಿಬಿರಗಳನ್ನು ಏರ್ಪಡಿಸಿ ಸವಲತ್ತುಗಳ ವಿತರಣೆ ಮಾಡಲಾಗಿದೆ ಎಂದರು.
ಸಾಮಾಜಿಕ ಭದ್ರತೆ ಯೋಜನೆಯಡಿ ತುಮಕೂರಿಗೆ 1.5 ಕೋಟಿ ರೂ. ನೀಡಲಾಗಿದೆ. ತುಮಕೂರು ಜಿಲ್ಲೆಗೆ ಒಟ್ಟು 380 ಕೋಟಿ ರೂ.ರೈತರ ಖಾತೆಗೆ ಜಮಾ ಮಾಡಲಾಗಿದೆ. ಫಸಲ್ ಬಿಮಾ ಯೋಜನೆಯಡಿ ವಾರ್ಷಿಕ 6 ಸಾವಿರ ರೈತರ ಖಾತೆಗೆ ಜಮೆ ಆಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರ 8 ಲ ಕೋಟಿ ರೂ. ಕುಡಿಯುವ ನೀರಿಗೆ ಮೀಸಲಿಟ್ಟಿದ್ದು, ರಾಜ್ಯಕ್ಕೆ 76 ಸಾವಿರ ಕೋಟಿ ಮೀಸಲಿರಿಸಲಾಗಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದರು. ಬಿಇಒ ಹನುಮಂತರಾಯಪ್ಪ, ಗ್ರಾಪಂ ಅಧ್ಯೆ ಅಂಜಿನಮ್ಮ ನ್ಯಾತಪ್ಪ, ಬಿಜೆಪಿ ಮುಖಂಡಾದ ನಾಗರಾಜು, ಪುರವರ ಮೂರ್ತಿ, ರಾಮದಾಸ್ ಹಾಗೂ ಬಿಜೆಪಿ, ಜೆಡಿಎಸ್ ಮುಖಂಡರು ಇದ್ದರು.
ಯಾವುದೇ ಅಧಿಕಾರ ಶಾಶ್ವತವಲ್ಲ:ನಾವು ದೇವರನ್ನು ಕಾಣಲು ಸಾಧ್ಯವಿಲ್ಲ. ಆದರೆ ನಂಬಿಕೆ ಮೇಲೆ ದೇವರನ್ನು ಕಾಣಬಹುದು ಎಂಬುದಕ್ಕೆ ನಾನೇ ಸಾ. ಚುನಾವಣೆಗೂ ಮುನ್ನವೇ ನಾನು ೇತ್ರದ ದಂಡಿನಮಾರಮ್ಮನ ಆಶೀರ್ವಾದ ಪಡೆದು ೇತ್ರಕ್ಕೆ ಕಾಲಿಟ್ಟೆ. ಆಗಲೇ ಈ ೇತ್ರದ ಮಹತ್ವ, ಶಕ್ತಿದೇವತೆ ಬಗ್ಗೆ ತಿಳಿದುಕೊಂಡಿದ್ದೇನೆ. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಯಾವುದೇ ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದಾಗ ಮಾತ್ರ ಸಾಧನೆ ಜನಮಾನಸದಲ್ಲಿ ಉಳಿಯುತ್ತದೆ. ಕೇಂದ್ರ ಸರ್ಕಾರದ ಹೆಚ್ಚು ಅನುದಾನವನ್ನು ಜಿಲ್ಲೆಗೆ ತಂದು ೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.