ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ

Raitha
Published on

ಚಿತ್ರದುರ್ಗ: ತಾಲೂಕಿನ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸೂಚನೆಯಂತೆ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ತಂಡ ಭಾನುವಾರ ಅಬ್ಬಿನ ಹೊಳಲು ಹತ್ತಿರದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಿಸಿತು.

ಅಜ್ಜಂಪುರ ರೈಲ್ವೆ ಬ್ರಿಡ್ಜ್ ಬಳಿಯ ಚಿತ್ರದುರ್ಗ ಶಾಖಾ ಕಾಲುವೆ ‘ವೈ’ ಜಂಕ್ಷನ್, ಅಬ್ಬಿನ ಹೊಳಲು ಸಮೀಪ ಗ್ರಾಮಸ್ಥರಿಂದ ಸ್ಥಗಿತಗೊಂಡಿರುವ 100 ಮೀಟರ್ ಕಾಮಗಾರಿ ವೀಕ್ಷಿಸಿದರು.

ಕಾಮಗಾರಿಯ ವ್ಯವಸ್ಥಾಪಕ ಅನಿಲ್‌ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಜೂ. 4ರಂದು ಸಿಎಂ, ಡಿಸಿಎಂ ಅಧ್ಯಕ್ಷತೆಯಲ್ಲಿ ಈ ಗ್ರಾಮದ ರೈತರು, ಇಂಜಿನಿಯರ್‌ಗಳ ಸಭೆ ಕರೆಯಲಾಗಿದೆ. ಗ್ರಾಮಸ್ಥರು ಒಪ್ಪಿದರೆ, ಕೆಲಸ ಆರಂಭವಾಗಲಿದೆ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜ್, ರೈತ ಮುಖಂಡರಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಲವಕುಮಾರ್, ತಿಮ್ಮಯ್ಯ, ಸುರೇಶ್, ಆಡನೂರು ಶಿವಕುಮಾರ್, ರಾಜಶೇಖರ್, ಸಿದ್ದರಾಮಪ್ಪ, ಅಜಯ್, ರಾಮರೆಡ್ಡಿ, ಸಿದ್ದಪ್ಪ, ಮಲ್ಲಿಕಾರ್ಜುನ್, ನಾಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net