ಭದ್ರತಾ ಸಿಬ್ಬಂದಿಯನ್ನು ಗೌರವಿಸಿ

9-100
ಬೆಳಗಾವಿ ನಗರದ ಎಕ್ಸ್‌ಟ್ರೀಮ್ ಸೆಕ್ಯೂರಿಟಿಯ ಕೇಂದ್ರ ಕಚೇರಿಯಲ್ಲಿ ಈಚೆಗೆ ಖಾಸಗಿ ಭದ್ರತಾ ದಿನ ಕಾರ್ಯಕ್ರಮ ಜರುಗಿತು. ಎಂಡಿ ಇಂದ್ರಜೀತ್, ಸಂದೀಪ ಅಷ್ಟೇಕರ್, ಮನೀಶಾ ಅಂಗೋಲ್ಕರ, ಯೋಗಶ್ರೀ ದೇಶಪಾಂಡೆ ಇತರರಿದ್ದರು.
Published on

ಬೆಳಗಾವಿ: ಮುಂಬರುವ ದಿನಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಭದ್ರತಾ ಸಿಬ್ಬಂದಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಕ್ಸ್‌ಟ್ರೀಮ್ ಸೆಕ್ಯೂರಿಟಿ ಕಂಪನಿಯ ಎಂಡಿ ಇಂದ್ರಜೀತ್ ತಿಳಿಸಿದರು. ನಗರದ ಎಕ್ಸ್‌ಟ್ರೀಮ್ ಸೆಕ್ಯೂರಿಟಿಯ ಕೇಂದ್ರ ಕಚೇರಿಯಲ್ಲಿ ಈಚೆಗೆ ಜರುಗಿದ ಖಾಸಗಿ ಭದ್ರತಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನದ 24 ಗಂಟೆ ಭದ್ರತೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಭದ್ರತಾ ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು. ಸಂದೀಪ ಅಷ್ಟೇಕರ್, ಕಂಪನಿಯ ಸಿಎಒ ಮನೀಶಾ ಅಂಗೋಲ್ಕರ, ಯೋಗಶ್ರೀ ದೇಶಪಾಂಡೆ, ಆರತಿ ಗಾಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net