ಭದ್ರಗಿರಿಯಲ್ಲಿ ಕಾವಡಿ ಜಾತ್ರಾ ಮಹೋತ್ಸವ

TKE BHADRA)
ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಭಕ್ತರು ವಿವಿಧ ಕಾವಡಿ ಹೊತ್ತು ಬಂದರು.
Published on

ತರೀಕೆರೆ: ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಶನಿವಾರ ಆಡಿ ಕತಿಕ ಕಾವಡಿ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.

ಬೆಳಗಿನ ಜಾವ 4ಕ್ಕೆ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿಯ ವಿಶ್ವರೂಪ ದರ್ಶನವಾಯಿತು. ಬಳಿಕ ಎಳನೀರು, ಹಾಲು, ತುಪ್ಪ, ಮೊಸರು, ಜೇನುತುಪ್ಪ, ಸುಗಂಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. 5 ಗಂಟೆಯಿಂದ ಉತ್ಸವ ಪೂಜೆ ನೆರವೇರಿಸಲಾಯಿತು. ಕಾವಡಿ ಹರಕೆ ಸಮರ್ಪಣೆ ನಂತರ ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆಯಿತು.

ಶ್ರೀ ಮುರುಗೇಶ್ ಸ್ವಾಮೀಜಿ ನೇತತ್ವದಲ್ಲಿ ಆಡಿ ಕತಿಕ ಕಾವಡಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭದ್ರಾವತಿ, ಅರಸಿಕೆರೆ, ದಾವಣಗೆರೆ, ಗೋವಾ ಮುಂತಾದ ಕಡೆಗಳಿಂದ ಪುಷ್ಪ, ಪಾಲ್, ವೇಲ್, ಹಾಲ್, ನವೀಲು ಸೇರಿ ವಿವಿಧ ಕಾವಡಿ ಹೊತ್ತು ಬಂದ ಭಕ್ತರು ದೇವರಿಗೆ ಹರಕೆ ಸಮರ್ಪಿಸಿದರು. ಸಂಜೆ 5.30 ರಿಂದ ದೇಗುಲದಲ್ಲಿ ದೀಪಾರಾಧನೆ, ರಾತ್ರಿ 10 ಗಂಟೆಗೆ ಅರ್ಧಜಾಮ ಪೂಜೆ ಸಲ್ಲಿಸಲಾಯಿತು.

ಶಾಸಕ ಜಿ.ಎಚ್.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ, ಉಪಾಧ್ಯಕ್ಷೆ ಅಲುಮೇಲು, ಸದಸ್ಯ ರಂಗಸ್ವಾಮಿ, ಮಾಜಿ ಸದಸ್ಯ ಇ.ಧನಂಜಯ, ಭದ್ರಾವತಿ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಕರುಣಾಮೂರ್ತಿ, ದೇಗುಲ ಆಡಳಿತಾಧಿಕಾರಿ ಎಂ.ಚಂದ್ರಘೋಷನ್, ಪ್ರಮುಖರಾದ ಬೊಮ್ಮರಾಜು, ತಿರುಮೂರ್ತಿ, ಸೋಮು, ಡಾ. ವಿಕ್ರಂ, ವೇಲು, ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net