ಭತ್ತದ ಬೆಳೆ ಹಾನಿ ಪರಿಶೀಲನೆ

15SPT7
Published on

ಸೋಮವಾರಪೇಟೆ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಆಧಿಕಾರಿಗಳು ಜಂಟಿಯಾಗಿ ಗುರುವಾರ ನಷ್ಟದ ಪರಿಶೀಲನೆ ನಡೆಸಿದರು.


ಸಂಗಯ್ಯನಪುರ, ನೇರುಗಳಲೆ, ಬಾಣವಾರ, ಸಿದ್ಧಲಿಂಗಪುರ, ಹೆಬ್ಬಾಲೆ ಸೇರಿದಂತೆ ತಾಲೂಕಿನ ಹಲವು ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.


ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು ಮಾತನಾಡಿ, ಇತ್ತೀಚೆಗೆ ಸುರಿದ ಅಧಿಕ ಮಳೆಯಿಂದ ಗರ್ವಾಲೆ, ಹರಗ, ಚಿಕ್ಕಾರ, ಹೆಬ್ಬಾಲೆ ಸೇರಿದಂತೆ ಹಲವೆಡೆ ಭತ್ತದ ಗದ್ದೆಯಲ್ಲಿ ಕೊಯ್ಲು ಮಾಡಿದ ಪೈರಿನ ಮೇಲೆ ನೀರು ನಿಂತು ಶೇ. 90ರಷ್ಟು ಹಾನಿಯಾಗಿದೆ. ಈ ಮಾಹಿತಿಯನ್ನು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ವರದಿ ಮಾಡಲಾಗುತ್ತದೆ. ರೈತರು ಹಾನಿಯ ಫೋಟೋ, ಆರ್‌ಟಿಸಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.


ಕೃಷಿ ಅಧಿಕಾರಿಗಳಾದ ಬಾಲರಾಜ್ ರಂಗರಾಜ್, ನವ್ಯ ನಾಣಯ್ಯ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net