ಭತ್ತಕ್ಕೆ ಗರಿ ಒಣಗುವ ರೋಗ

08 KAMPLI 02
Published on

ಕಂಪ್ಲಿ: ಸಣಾಪುರ ಗ್ರಾಮದಲ್ಲಿ ಭತ್ತದ ಬೆಳೆಗೆ ಗರಿ ಒಣಗುವ ರೋಗ ತಗುಲಿದ್ದು, ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಬೆಳೆ ಪರಿಶೀಲಿಸಿದರು.

10 ಎಕರೆ ಪ್ರದೇಶದಲ್ಲಿ ರೋಗದಿಂದಾಗಿ ಭತ್ತದ ಪೈರು ಸಂಪೂರ್ಣ ನೆಲಕ್ಕೆ ಬಿದ್ದಿದೆ. ಬೆಳೆಗೆ ವಿಮೆ ಮಾಡಿಸಲಾಗಿದೆ. ಆದರೆ, ವಿಮೆ ಅಧಿಕಾರಿಗಳು ಬೆಳೆ ಹಾನಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿಮೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ವಿಮೆ ಮಾಡಿಸಿರುವ ರೈತರಿಗೆ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net